ನವದೆಹಲಿ: ಪಹಲ್ಗಾಂ ಉಗ್ರ ದಾಳಿಗೆ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಗೆ ವಿದೇಶದಿಂದ ಹಣದ ಹರಿವು ನಡೆದಿರುವುದಕ್ಕೆ ಹೊಸ ಪುರಾವೆಗಳು ಪತ್ತೆಯಾಗಿವೆ. ಎನ್ಐಎ ತನಿಖೆಯಲ್ಲಿ, ಮಲೇಷ್ಯಾದಿಂದ ಹವಾಲಾ ಮೂಲಕ ಹಣ ಹರಿದು TRFಗೆ ಫಂಡಿಂಗ್ ಆಗುತ್ತಿದೆ ಎಂಬ ಅನುಮಾನಕ್ಕೆ ಬಲ ಸಿಕ್ಕಿದೆ.
ತನಿಖೆಯ ಪ್ರಮುಖ ಅಂಶಗಳು:
TRF ಪಾಕಿಸ್ತಾನ ಬೆಂಬಲಿತ ಕಾಶ್ಮೀರದ ಉಗ್ರ ಸಂಘಟನೆ, 2019ರಲ್ಲಿ ಸ್ಥಾಪನೆಗೊಂಡಿದೆ.2024ರ ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ನಡೆದ ದಾಳಿಯ ಹೊಣೆ ಮೊದಲು ಈ ಸಂಘಟನೆ ಹೊತ್ತಿತ್ತು.ಎನ್ಐಎ, TRF ಜಾಲವನ್ನು ಭೇದಿಸುವ ಪ್ರಯತ್ನದಲ್ಲಿದ್ದು, ಶ್ರೀನಗರದ ಒಬ್ಬರ ಫೋನ್‌ನಲ್ಲಿ 450ಕ್ಕೂ ಹೆಚ್ಚು ಸಂಪರ್ಕಗಳು ಪತ್ತೆಯಾಗಿವೆ.ಈ ಸಂಪರ್ಕಗಳಲ್ಲಿ ಹಲವರು ಹಿಂದಿನ ಉಗ್ರ ದಾಳಿಗಳಲ್ಲಿ ಆರೋಪಿಗಳಾಗಿದ್ದಾರೆ.
ಹವಾಲಾ ಮೂಲಕ ಹಣದ ಜಾಲ:
ಮಲೇಷ್ಯಾದ ನಿವಾಸಿ ಸಾಜದ್ ಅಹ್ಮದ್ ಮಿರ್ ಮತ್ತು ಶ್ರೀನಗರದ ಯಾಸಿರ್ ಹಯಾತ್ ಹೆಸರುಗಳು ತನಿಖೆಯಲ್ಲಿ ಮುಖ್ಯವಾಗಿ ಹೊರಹೊಮ್ಮಿವೆ.ಹಯಾತ್ ಹಲವು ಬಾರಿ ಮಲೇಷ್ಯಾಗೆ ತೆರಳಿದ್ದು, ಮಿರ್ ನೆರವಿನಿಂದ 9 ಲಕ್ಷ ರೂಗಳನ್ನು TRFಗೆ ರವಾನಿಸಿದ್ದಾನೆ.ಈ ಹಣವನ್ನು TRF ಪ್ರಮುಖ ಆಪರೇಟಿವ್ ಶಫತ್ ವಾನಿ ಮೂಲಕ ಬಳಕೆ ಮಾಡಲಾಗಿದೆ.ಶಫತ್ ವಾನಿ ವಿಶ್ವವಿದ್ಯಾಲಯ ಕಾನ್ಫರೆನ್ಸ್ ನೆಪದಲ್ಲಿ ಮಲೇಷ್ಯಾಗೆ ಭೇಟಿ ನೀಡಿದ್ದಾನೆ ಎನ್ನಲಾಗಿದೆ.
ಅಂತರಾಷ್ಟ್ರೀಯ ನಿಗಾವಹಣೆ:
TRF, ಲಷ್ಕರೆ ತೈಯಬಾದ ಪ್ರಾಕ್ಸಿ ಸಂಘಟನೆ ಎಂದು ಪರಿಗಣಿಸಲಾಗುತ್ತಿದ್ದು, ಅಮೆರಿಕ ಸಹ TRF ಅನ್ನು ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.
For More Updates Join our WhatsApp Group :
