ಕಾರಿಗೆ ಬೆ*ಕಿ ಹಚ್ಚಿ ಸತ್ತೆನೆಂದು ನಾಟಕವಾಡಿದ ಬ್ಯಾಂಕ್ ಏಜೆಂಟ್.
ಮುಂಬೈ: ಮಹಾರಾಷ್ಟ್ರದ ಲಾತೂರಿನಲ್ಲಿ ಕಾರೊಂದು ಸುಟ್ಟುಕರಕಲಾದ ರೀತಿಯಲ್ಲಿ ಪತ್ತೆಯಾಗಿತ್ತು, ಅದರಲ್ಲಿ ಗೋಣಿಚೀಲದಲ್ಲಿದ್ದ ಶವಕೂಡ ಬೆಂದು ಹೋಗಿತ್ತು. ಈ ಕಾರು ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್ನದ್ದು ಆದ ಕಾರಣ ಆತನೇ ಸಾವನ್ನಪ್ಪಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನಡೆದಿರುವ ಘಟನೆಯೇ ಬೇರೆ, ಈ ಗಣೇಶ್ ಚೌಹಾಣ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಲಿಫ್ಟ್ ಕೊಡುತ್ತೀನಿ ಎಂದು ಹತ್ತಿಸಿಕೊಂಡು ಕೊಂದೇ ಬಿಟ್ಟಿದ್ದ. ಬಳಿಕ ಆತನನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಆದರೆ ಗಣೇಶ್ಗೆ ಮತ್ತೊಬ್ಬನನ್ನು ಕೊಲ್ಲುವ ಉದ್ದೇಶವಿರಲಿಲ್ಲ, ಒಟ್ಟಿನಲ್ಲಿ ತಾನು ಸತ್ತಿದ್ದೇನೆಂದು ಎಲ್ಲರೂ ತಿಳಿದುಕೊಳ್ಳಬೇಕೆಂಬ ಉದ್ದೇಶವಿದ್ದಿದ್ದು ಸ್ಪಷ್ಟವಾಗಿದೆ. ಕಾರಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಅವರು ಅದನ್ನು ತಮ್ಮ ಸಂಬಂಧಿಕರೊಬ್ಬರಿಗೆ ನೀಡಿರುವುದು ಕಂಡುಬಂದಿತ್ತು. ಆ ವ್ಯಕ್ತಿ ಸಂಬಂಧಿ ಗಣೇಶ್ ಚೌಹಾಣ್ ಸಂಪರ್ಕಿಸಲು ಮುಂದಾದಾಗ ಆತ ಮನೆಗೆ ಬಂದಿಲ್ಲ, ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸರಿಗೆ ತಿಳಿಸಲಾಯಿತು.
ಈ ಎಲ್ಲಾ ಸಂಗತಿಗಳ ಆಧಾರದ ಮೇಲೆ ಮೃತಪಟ್ಟ ವ್ಯಕ್ತಿ ಗಣೇಶ್ ಎಂಬುದು ಆರಂಭಿಕ ಊಹೆಯಾಗಿತ್ತು. ಆದರೆ ಪೊಲೀಸರ ತನಿಖೆ ಮುಂದುವರೆದಂತೆ ಪೊಲೀಸರಿಗೆ ಹಲವು ಅಂಶಗಳು ಮನವರಿಕೆಯಾಗುತ್ತಾ ಹೋಗಿತ್ತು. ಆತನಿಗೆ ಓರ್ವ ಯುವತಿ ಜತೆ ಪ್ರೀತಿ ಇದೆ ಎಂಬುದು ತಿಳಿದುಬಂದಿತ್ತು.
ಆಕೆಯನ್ನು ಸಂಪರ್ಕಿಸಿದಾಗ ಈ ಘಟನೆಯ ಬಳಿಕ ಗಣೇಶ್ ಬೇರೊಂದು ನಂಬರ್ ಬಳಸಿ ಆಕೆಗೆ ಸಂದೇಶ ಕಳುಹಿಸಿರುವುದು ತಿಳಿದುಬಂದಿತ್ತು. ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ಜೀವಂತವಾಗಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹುಡುಕಾಟ ಆರಂಭಿಸಿದ್ದರು.
For More Updates Join our WhatsApp Group :




