ಮಿತ್ರಪಕ್ಷಗಳ ಮೈತ್ರಿಕೂಟಕ್ಕೆ “ಇಂಡಿಯಾ” ಎಂದು ನಾಮಕರಣ: ಇಂಡಿಯಾ ಎಂದರೇನು ಗೊತ್ತೇ..?

ಬೆಂಗಳೂರು: ಮುಂಬರುವ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಪಕ್ಷವನ್ನು ಮಣಿಸಲು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ಮಿತ್ರಪಕ್ಷಗಳ ಮೈತ್ರಿಕೂಟಕ್ಕೆ “ಇಂಡಿಯಾ” ಎಂದು ಹೆಸರಿಡಲಾಗಿದೆ.

ಇಂಡಿಯಾ

ಈ ಹೆಸರಿನ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಇಂಡಿಯಾ ಎಂದರೆ ( I-N-D-I-A)ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈಯನ್ಸ್ನ ಸಂಕ್ಷಿಪ್ತ ರೂಪ. ಬೆಂಗಳೂರಿನಲ್ಲಿ ಸೋಮವಾರ ನಡೆದ ಮೊದಲ ದಿನದ ಸಭೆಯ ಅನೌಪಚಾರಿಕವಾಗಿತ್ತು. ಒಂದಿಷ್ಟು ಚರ್ಚೆ, ಭರ್ಜರಿ ಊಟವಿತ್ತು. ಆದರೆ, ಇಂದು ಮಹಾಮೈತ್ರಿಕೂಟದ ಸಭೆಯಲ್ಲಿ ಮೈತ್ರಿಕೂಟಕ್ಕೆ ಸೂಕ್ತ ಹೆಸರು ಆಯ್ಕೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.

ನಿನ್ನೆ ನಡೆದ ಔತಣಕೂಟದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಈ ಮೈತ್ರಿಕೂಟಕ್ಕೆ ಹೊಸ ಹೆಸರು ಇಡುವಂತೆ ಸೂಚಿಸಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಈ ಕುರಿತು ಚರ್ಚಿಸಿ ಒಮ್ಮತಕ್ಕೆ ಬರುವ ಪ್ರಯತ್ನ ನಡೆಸಲಾಗುತ್ತಿದೆ. ಸಭೆಯಲ್ಲಿ I-N-D-I-A ಅಥವಾ ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈಯನ್ಸ್ ಪದಗಳ ಸಂಕ್ಷಿಪ್ತ ರೂಪವನ್ನು ವಿರೋಧ ಪಕ್ಷದ ಹೆಸರಾಗಿ ಇಡಲು ಸೂಚಿಸಲಾಗಿದೆ.

ಆದರೆ, ಎಡ ಪಕ್ಷಗಳು ಅಲೈಯೆನ್ಸ್ ಅನ್ನು ಫ್ರಂಟ್ ಎಂದು ಬದಲಾಯಿಸಬೇಕು ಎಂದು ಬಯಸುತ್ತಿವೆ. ಕೆಲವು ಪಕ್ಷಗಳು ಇಂಡಿಯಾದಲ್ಲಿ ಇರುವ ಎನ್ಡಿಎ ಎಂಬ ಅಕ್ಷರದ ಕುರಿತು ತಕರಾರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇಂಡಿಯಾ ಪದದಲ್ಲಿ ಇರುವ ಐದು ಅಕ್ಷರಗಳು ಮೈತ್ರಿಕೂಟದ ಸಭೆಯಲ್ಲಿ ಹೊಸ ಚರ್ಚೆಗೆ ನಾಂದಿಯಾಗಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *