Namma Metro || ಹೊಸ ಮಾರ್ಗದಲ್ಲಿ ಸೆಪ್ಟಂಬರ್ನಲ್ಲಿ ಮೆಟ್ರೋ ಸಂಚಾರ?

Namma Metro

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಯಾಣಿಕರು ಓಡಾಡಲು ಕಾತರರಾಗಿದ್ದಾರೆ. ಈ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದಕ್ಕಿಂತ ಮೊದಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ವಿಸ್ತೃತ ಹೊಸ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ನಡೆಸಲಿದೆ.

ಹೌದು, ನಮ್ಮ ಮೆಟ್ರೋ ರೇಷ್ಮೆ ಮಂಡಳಿ ಮತ್ತು ನಾಗಸಂದ್ರವರೆಗಿನ ಹಸಿರು ಮಾರ್ಗವು 3.7 ಕಿಲೋ ಮೀಟರ್ ವಿಸ್ತರಣೆಗೊಂಡಿದೆ. ಈ ಮಾರ್ಗದಲ್ಲಿ ಇಂದು ಆಗಸ್ಟ್ 06 ಮಂಗಳವಾರದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಹಾಗಾದರೆ ಪ್ರಾಯೋಗಿಕ ಸಂಚಾರ ಯಾವಾಗ ಅಂತ್ಯವಾಗಲಿದೆ?, ವಾಣಿಜ್ಯ ಕಾರ್ಯಾಚರಣೆ ಆರಂಭ ಯಾವಾಗ? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ನಾಗಸಂದ್ರದಿಂದ ಮಾದಾವರ ವರೆಗೆ ವಿಸ್ತರಣೆ ಆಗಿರುವ ಹಸಿರು ಮಾರ್ಗದಲ್ಲಿ ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳು ಕಾಲಾವಕಾಶ ಹಿಡಿಯಲಿದೆ.

Namma Metro: ನಾಗಸಂದ್ರ-ಮಾದಾವರವರೆಗೆ ಆ. 6ರಿಂದ ಪ್ರಾಯೋಗಿಕ ಸಂಚಾರ, ಸಾರ್ವಜನಿಕರಿಗೆ ಮುಕ್ತ ಯಾವಾಗ?

ಆಯುಕ್ತ ತಪಾಸಣೆ ಮಾಡಿ ಅನುಮತಿ

ಸದ್ಯ ಆಗಸ್ಟ್ 6ರಂದು ಆರಂಭವಾಗಿರುವ ಪ್ರಾಯೋಗಿಕ ಸಂಚಾರ ಸೆಪ್ಟಂಬರ್ ಮೊದಲ ವಾರದ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಮೆಟ್ರೋ ಆಯುಕ್ತರು ಸಿಗ್ನಲಿಂಗ್, ಟ್ರ್ಯಾಕ್ ಸೇರಿದಂತೆ ಪ್ರತಿಯೊಂದನ್ನು ತಪಾಸಣೆ ನಡೆಸಲಿದ್ದಾರೆ. ಇದಾಗಿ ಸಾರ್ವಜನಿಕರಿಗೆ ಈ ವಿಸ್ತೃತ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಅನುಮತಿ ನೀಡಲಾಗುತ್ತಿದೆ.

Namma Metro: ಬೆಂಗಳೂರಲ್ಲಿ 5 ಹೊಸ ನಮ್ಮ ಮೆಟ್ರೋ ಡಿಪೋ ನಿರ್ಮಾಣ

ಇದೆಲ್ಲ ಪ್ರಕ್ರಿಯೆಯು ಸೆಪ್ಟಂಬರ್ ಎರಡು ಇಲ್ಲವೇ ಮೂರನೇ ವಾರ ಮುಗಿದರೆ, ಅದೇ ತಿಂಗಳ ಅಂತ್ಯಕ್ಕೆ ಇಲ್ಲವೇ ಅಕ್ಟೋಬರ್ ಆರಂಭದಲ್ಲಿ ಸಾರ್ವಜನಿಕರು ಮಾದಾವರವರೆಗೂ ಓಡಾಡಬಹುದಾಗಿದೆ. ಈ ಮಾರ್ಗವು ನೆಲಮಂಗಲ, ತುಮಕೂರು ಭಾಗದಿಂದ ಬರುವವರಿಗೆ ಮತ್ತು ಇಲ್ಲಿಗೆ ಹೋಗುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

Namma Metro Pink Line: ‘ತುಂಗಾ’ ಟಿಬಿಎಂನಿಂದ ಒಂದೇ ತಿಂಗಳಲ್ಲಿ ಗರಿಷ್ಠ ಸುರಂಗ ಕಾರ್ಯ

ವಿಸ್ತರಣೆ ಮಾರ್ಗಕ್ಕೆ ತಗುಲಿದ್ದು ರೂ.298 ಕೋಟಿ

ವಿಸ್ತರಣೆಗೊಂಡ 3.7 ಕಿಲೋ ಮೀಟರ್ ನಾಗಸಂದ್ರ-ಮಾದಾವರವರೆಗಿನ ಮಾರ್ಗದ ಕಾಮಗಾರಿಗೆ ಬರೋಬ್ಬರಿ 298 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸದ್ಯ ಕಾಮಗಾರಿ ಮುಗಿದು ಇಂದಿನಿಂದ ಒಂದು ತಿಂಗಳು ವಿವಿಧ ರೀತಿಯ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಈ ಮಾರ್ಗದ ನಂತರ ಡಿಸೆಂಬರ್ ನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *