ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಶಾಸಕರ ಮೇಲೆ ಕೇಸ್; ಆರೋಪಿಯ ಬಂಧನ.
ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಖುದ್ದು ‘ಕೈ’ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿದ್ದು, ಪರ್ಸನಲ್ ಮತ್ತು ರಾಜಕೀಯ ವಿಚಾರವಾಗಿ 2 ಇನ್ಸ್ಟಾಗ್ರಾಮ್ ಖಾತೆ ಇದೆ. ಈ ನಡುವೆ ಪರ್ಸನಲ್ ಖಾತೆಗೆ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ವ್ಯಾಯಾಮ ಮಾಡಿದ್ರೂ ತಪ್ಪು, ಬರ್ತ್ಡೇ ಆಚರಿಸಿದ್ರೆ ತಪ್ಪಾ? ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದೇನೆ.ಅಶ್ಲೀಲ ಕಮೆಂಟ್ ಸಂಬಂಧ ಕಾರ್ಯಕರ್ತರು ದೂರು ನೀಡಿದ್ದಾರೆ.ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಕೂಡ ಮಾಡಿದ್ದಾರೆ. ನಾನು ಧೈರ್ಯವಾಗಿ ಜೀವನ ಮಾಡ್ತೇನೆ, ನನಗೆ ಯಾರ ಭಯವಿಲ್ಲ ಎಂದು ಗುಡುಗಿದರು.
ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ನಾನು ಹೇಗಿದ್ದೆನೋ ಅದೇ ರೀತಿ ಈಗಲೂ ಇರಲು ಪ್ರಯತ್ನ ಮಾಡುತ್ತೇನೆ. ರಾಜಕೀಯ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇರಬಾರದು. ನಮ್ಮ ವೈಯಕ್ತಿಕ ಜೀವನ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು . ನನ್ನ ಬಟ್ಟೆಗಳ ಬಗ್ಗೆ ಇನ್ಸ್ಟಾಗ್ರಾಮ್ ಎಂಎಲ್ಎ ಹಾಗೂ ಗುಂಡಿ ಮುಚ್ಚಿಲ್ಲ ಎಂದು ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾರೆ. ರಾಜ್ಯದಲ್ಲಿ 11 ಮಹಿಳಾ ಶಾಸಕರಿದ್ದೇವೆ. ನನ್ನ ಇನ್ಸ್ಟಾಗ್ರಾಮ್, ಫೇಸ್ಬುಕ್ ಖಾತೆ ಜನರಿಗೆ ಇಟ್ಟಿದ್ದೇನೆ. ಇದು ತಪ್ಪಾ? ಪಾರದರ್ಶಕವಾಗಿ ಜೀವನ ಮಾಡುವುದು ತಪ್ಪಾ? ಇದೆ ಕಾರಣಕ್ಕೆ ರಾಜಕಾರಣಿಗಳು ವೈಯಕ್ತಿಕ ಜೀವನ ಮುಚ್ಚಿಡ್ತಾರೆ . ನಾವು ಸಾರ್ವಜನಿಕ ಜೀವನದಲ್ಲಿದ್ದೇನೆ, ಜಿಗುಪ್ಸೆ ಮತ್ತು ಹಿಂಸೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
For More Updates Join our WhatsApp Group :



