NEET 2024 – ವಿದ್ಯಾರ್ಥಿಗಳ ಗ್ರೇಸ್​ ಅಂಕ ರದ್ದುಗೊಳಿಸಿ, ಮರು ಪರೀಕ್ಷೆಗೆ ಅವಕಾಶ

ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಕಡ್ಡಾಯವಾಗಿ ಪರಿಹಾರ ನೀಡಬೇಕು - ಸುಪ್ರೀಕೋರ್ಟ್

ನವದೆಹಲಿ: NEET- UG 2024 ವಿವಾದಕ್ಕೆ ಸಂಬಂಧಿಸಿದಂತೆ 1,563 ಅಭ್ಯರ್ಥಿಗಳಿಗೆ ನೀಡಲಾದ ಗ್ರೇಸ್​ ಅಂಕಗಳನ್ನು ರದ್ದುಗೊಳಿಸಿ, ಅವರಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳು ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ 2024ರ ನೀಟ್​-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕೆಂದು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಇಂದು ನ್ಯಾಯಮೂರ್ತಿಗಳಾದ ವಿಕ್ರಮ್​ ನಾಥ್​ ಹಾಗೂ ಸಂದೀಪ್​ ಮೆಹ್ತಾ ಅವರ ರಜಾಕಾಲದ ಪೀಠ​ ನಡೆಸಿತು. ಮಂಗಳವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಪೀಠ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ 2024ರ ನೀಟ್​ (ಯುಜಿ) ಅನ್ನು ಹೊಸದಾಗಿ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ)ಗೆ ಸೂಚಿಸಿತ್ತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಕನು ಅಗರ್ವಾಲ್​, 1,563 ಅಭ್ಯರ್ಥಿಗಳಿಗೆ ಗ್ರೇಸ್​ ಮಾರ್ಕ್​ಗಳಿಲ್ಲದೇ ಅವರ ನಿಜವಾದ ಅಂಕಗಳನ್ನು ತಿಳಿಸಲಾಗುವುದು. ಮತ್ತು ಮರು ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗುವುದು. ಕೌನ್ಸೆಲಿಂಗ್​ಗೂ ಮೊದಲು ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು. ಮತ್ತೊಮ್ಮೆ ಪರೀಕ್ಷೆ ಬರೆಯಲು ಬಯಸದವರಿಗೆ ಮೇ 5ರಂದು ನಡೆದ ಪರೀಕ್ಷೆಯ ಆಧಾರದ ಮೇಲೆ ಅವರ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *