ನೀಟ್‌ ಫಲಿತಾಂಶ ವಿವಾದ | ದೂರು ಪರಿಹಾರ ಸಮಿತಿ ಸೂಚಿಸಿದರೆ ಮರುಪರೀಕ್ಷೆ

02

Doctor consulting male patient, working on diagnostic examination on men's health disease or mental illness, and writing on prescription record information document in clinic or hospital office

ನವದೆಹಲಿ: ಈ ವರ್ಷದ ನೀಟ್‌ ವಿವಾದದ ಕುರಿತಂತೆ ಇಂದು ನ್ಯಾಷನಲ್‌ ಟೆಸ್ಟಿಂಗ್‌ ಏಜನ್ಸಿ ಪತ್ರಿಕಾಗೋಷ್ಠಿ ನಡೆಸಿದೆ. ಈ ಸಂದರ್ಭ ಮಾತನಾಡಿದ ಎನ್‌ಟಿಎ ನಿರ್ದೇಶಕರು, “ಮರುಪರೀಕ್ಷೆ ನಡೆಸಬೇಕೆಂದು ದೂರು ನಿವಾರಣ ಸಮಿತಿಗೆ ಅನಿಸಿದರೆ, ಅದನ್ನು ನಡೆಸಲಾಗುವುದು,” ಎಂದು ಹೇಳಿದ್ದಾರೆ.

ನೀಟ್‌ ಫಲಿತಾಂಶಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹಲವಾರು ಸಂಬಂಧಿತರು ಆಕ್ಷೇಪ ಮತ್ತು ಕಳವಳ ವ್ಯಕ್ತಪಡಿಸಿರುವ ನಡುವೆ ಎನ್‌ಟಿಎ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಹೊಸದಾಗಿ ರಚಿಸಲಾದ ಸಮಿತಿಯ ಶಿಫಾರಸುಗಳಂತೆಯೇ ಯಾವುದಾದರೂ ನಿರ್ಧಾರ ಕೈಗೊಳ್ಳಲಾಗುವುದು, ಪ್ರಕ್ರಿಯೆ ನ್ಯಾಯಯುತ ಮತ್ತು ಪಾರದರ್ಶಕವಾಗಿರಲಿದೆ ಎಂದು ಅವರು ಹೇಳಿದ್ದಾರೆ

Leave a Reply

Your email address will not be published. Required fields are marked *