ಮೊಡವೆ, ಮಲಬದ್ಧತೆ, ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ.
ನಮ್ಮ ಸುತ್ತಮುತ್ತ ಹಲವು ಬಗೆಯ ಔಷಧೀಯ ಸಸ್ಯಗಳಿವೆ. ಅವುಗಳಲ್ಲಿ ಕೆಲವುದರ ಬಗ್ಗೆ ನಮಗೆ ತಿಳಿದಿದೆ. ಆದರೆ ತಿಳಿದಿಲ್ಲದ ನೈಸರ್ಗಿಕ, ಔಷಧೀಯ ಗುಣಗಳನ್ನು ಹೊಂದಿರುವ ಹಲವು ಸಸ್ಯಗಳಿವೆ. ಇವು ವಿವಿಧ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇಂತಹ ಸಸ್ಯಗಳಲ್ಲಿ ನೆಲದ ನೆಲ್ಲಿಕಾಯಿ ಅಥವಾ ನೆಲನೆಲ್ಲಿಯೂ ಒಂದು. ಹಳ್ಳಿಗಳಲ್ಲಿ ತೋಟ, ಗದ್ದೆ ಹಾಗೆಯೇ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಸ್ಯಗಳನ್ನು ಹೆಚ್ಚಾಗಿ ಕಾಣಬಹುದು, ಸುಮಾರು ಒಂದು ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯ ನೆಲ್ಲಿಕಾಯಿಯನ್ನು ಹೋಲುವ ಎಲೆಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಇದನ್ನು ನೆಲನೆಲ್ಲಿ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಇದನ್ನು ‘ಭೂಮಿ ಆಮ್ಲ’ ಎಂದು ಕರೆಯಲಾಗುತ್ತದೆ. ಬಹುತೇಕ ವರ್ಷಪೂರ್ತಿ ಕಂಡುಬರುವ ಈ ಸಸ್ಯಗಳು ವಿವಿಧ ರೀತಿಯ ವೈರಲ್ ಸೋಂಕುಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತಾಗಿದ್ದು, ಮೊಡವೆ, ಹುಣ್ಣು, ಹೆಪಟೈಟಿಸ್ ಎ, ಬಿ ಮತ್ತು ಸಿ, ಹರ್ಪಿಸ್ ಮತ್ತು ಎಚ್‌ಐವಿಗಳಿಂದ ಉಂಟಾಗುವ ಕಾಮಾಲೆಗೆ ಇದು ಪರಿಹಾರ ನೀಡುವಂತಹ ಶಕ್ತಿ ಹೊಂದಿದೆ. ಹಾಗಾದರೆ ಇದರಿಂದ ಸಿಗುವ ಉಪಯೋಗವೇನು, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಕಾಮಾಲೆಗೆ ರೋಗಕ್ಕೆ ರಾಮಬಾಣ: ಸಾಮಾನ್ಯವಾಗಿ ಈ ಎಲೆಗಳು ಕಾಮಾಲೆಯನ್ನು ಕಡಿಮೆ ಮಾಡುವಲ್ಲಿ, ಯಕೃತ್ತಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದಲ್ಲಿನ ಬಿಲಿರುಬಿನ್ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ, ಯಕೃತ್ತನ್ನು ಬಲಪಡಿಸುತ್ತದೆ ಮತ್ತು ದೇಹಕ್ಕೆ ವೈರಸ್‌ಗಳ ವಿರುದ್ಧ ಹೋರಾಡಲು ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ.
ಚರ್ಮದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು: ಚರ್ಮದ ಮೇಲಿನ ತುರಿಕೆ, ದದ್ದುಗಳು ಮತ್ತು ಎಸ್ಜಿಮಾದಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬಾಹ್ಯ ಅನ್ವಯಿಕೆಯಾಗಿ ನೆಲನೆಲ್ಲಿ ಕಾರ್ಯನಿರ್ವಹಿಸುತ್ತದೆ.
ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುವ ದಿವ್ಯಔಷಧ: ನೆಲನೆಲ್ಲಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಈ ಎಲೆಯ ಸೇವನೆಯಿಂದ ಕರುಳಿನ ಚಲನೆ ಸುಧಾರಣೆಗೊಂಡು, ಮಲವಿಸರ್ಜನೆ ಸುಲಭವಾಗುತ್ತದೆ.
ಅಷ್ಟೇ ಅಲ್ಲ, ಈ ಎಲೆಗಳ ಸೇವನೆ ಮಾಡುವುದರಿಂದ ದೇಹದಿಂದ ವಿಷವ ಹೊರಹೋಗಿ ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೊಳ್ಳುತ್ತದೆ. ಪರೋಕ್ಷವಾಗಿ, ಇದು ಹೃದಯ ಸಂಬಂಧಿ ಕಾಯಿಲೆ, ರಕ್ತನಾಳಗಳ ಸಮಸ್ಯೆಗಳು ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ನೆಲ್ಲಿ ಗಿಡವನ್ನು ಸರಿಯಾಗಿ ಬಳಸುವುದರಿಂದ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇವುಗಳನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
For More Updates Join our WhatsApp Group :




