ಹೆಚ್ಚಿನ ಭಾರತೀಯರು ಚಹಾ ಪ್ರೇಮಿಗಳು ಅನೇಕರ ದಿನ ಆರಂಭವಾಗುವುದೇ ಬೆಳಗ್ಗೆ ಒಂದು ಕಪ್ ಚಹಾ ಕುಡಿಯುವುದರಿಂದ. ಅದರಲ್ಲೂ ಕೆಲವರಂತೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಅಂತೆಲ್ಲಾ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಟೀ ಕುಡಿಯುತ್ತಾರೆ. ಆದರೆ ಹೆಚ್ಚಿನವರು ಚಹಾ ಮಾಡುವುದರಿಂದ ಹಿಡಿದು ಕುಡಿಯುವವರೆಗೆ ಒಂದಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ತುಂಬಾನೇ ಹಾನಿಯಾಗುತ್ತದೆಯಂತೆ. ಈ ಬಗ್ಗೆ ಪೌಷ್ಠಿಕತಜ್ಞೆ ಕಿರಣ್ ಕುಕ್ರೇಜಾ ಮಾಹಿತಿಯನ್ನು ನೀಡಿದ್ದು, ಅವರು ಹೇಳುವಂತೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಚಹಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ:
ಅನೇಕ ಜನರು ಚಹಾ ತಯಾರಿಸುವುದರಿಂದ ಹಿಡಿದು ಕುಡಿಯುವವರೆಗೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಆದರೆ ತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬಾರದು, ಇದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಪೌಷ್ಟಿಕ ತಜ್ಞೆ ಕಿರಣ್ ಕುಕ್ರೇಜಾ ಹೇಳಿದ್ದಾರೆ.
ಮೊದಲನೇ ತಪ್ಪು: ಪ್ಲಾಸ್ಟಿಕ್ ಜರಡಿ ಬಳಕೆ. ಹೆಚ್ಚಿನವರು ತಮ್ಮ ಮನೆಯಲ್ಲಿ ಚಹಾ ಸೋಸಲು ಪ್ಲಾಸ್ಟಿಕ್ ಜರಡಿಯನ್ನು ಬಳಕೆ ಮಾಡುತ್ತಾರೆ. ಅಗ್ಗದಲ್ಲಿ ಲಭ್ಯವಿದೆ ಎಂಬ ಕಾರಣಕ್ಕೆ ಎಲ್ಲರೂ ಇದೇ ಫಿಲ್ಟರ್ನ್ನು ಬಳಸುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ ಎಂದು ಕಿರಣ್ ಕುಕ್ರೇಜಾ ಹೇಳುತ್ತಾರೆ. ಬಿಸಿ ಚಹಾವನ್ನು ಪ್ಲಾಸ್ಟಿಕ್ ಜರಡಿಯಲ್ಲಿ ಸೋಸಿದಾಗ, ಜರಡಿಯಲ್ಲಿರುವ ಪ್ಲಾಸ್ಟಿಕ್ ಕಣಗಳು ಚಹಾಕ್ಕೆ ಸೇರುತ್ತವೆ. ಇದು ನಮ್ಮ ದೇಹದಲ್ಲಿ ಸೇರಿಕೊಂಡು, ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಸ್ಟೀಲ್ ಫಿಲ್ಟರ್ಗಳನ್ನು ಬಳಸುವುದು ಉತ್ತಮ.
ಎರಡನೇ ತಪ್ಪು: ಒಮ್ಮೆ ತಯಾರಿಸಿದ ಚಹಾವನ್ನು ಪದೇ ಪದೇ ಬಿಸಿ ಮಾಡುವುದು. ಕೆಲವರು ಒಮ್ಮೆಲೇ ಅಧಿಕ ಪ್ರಮಾಣದಲ್ಲಿ ಚಹಾ ತಯಾರಿಸಿ ಅದನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತ್ತಾರೆ. ಹೀಗೆ ಒಮ್ಮೆ ತಯಾರಿಸಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ ಕಿರಣ್ ಕುಕ್ರೇಜಾ. ಏಕೆಂದರೆ ಹೀಗೆ ಮಾಡುವುದರಿಂದ ಚಹಾದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಜೀರ್ಣಕಾರಿ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮೂರನೇ ತಪ್ಪು: ಅನೇಕ ಜನರು ಹಾಲಿಗೆ ಚಹಾ ಪುಡಿ ಹಾಕಿ ಚಹಾ ಮಾಡುತ್ತಾರೆ. ಅದರೆ ಇದು ಸರಿಯಾದ ವಿಧಾನ ಅಲ್ಲ ಎಂದು ಹೇಳುತ್ತಾರೆ ಕಿರಣ್ ಕುಕ್ರೇಜಾ. ಹೀಗೆ ಹಾಲಿಗೆ ಚಹಾ ಪುಡಿ ಹಾಕಿ ಕುದಿಸುವುದರಿಂದ ಅದರಲ್ಲಿರುವ ಪ್ರೋಟೀನ್, ಉತ್ಕರ್ಷಣ ನಿರೋಧಕ ಅಂಶ ಕಳೆದು ಹೋಗುತ್ತದೆ. ಆದ್ದರಿಂದ ಮೊದಲು ಸ್ವಲ್ಪ ನೀರಿನಲ್ಲಿ ಚಹಾ ಪುಡಿಯನ್ನು ಹಾಕಿ ಕುದಿಸಿ, ನಂತರ ಅದಕ್ಕೆ ಹಾಲು ಸೇರಿಸಬೇಕು. ಇದು ಚಹಾ ತಯಾರಿಸುವ ಸರಿಯಾದ ವಿಧಾನ.
For More Updates Join our WhatsApp Group :