Operation Sindoor ಮೇಲೆ ಹೊಸ ಸಿನಿಮಾ: ನಿರ್ದೇಶಕ ಯಾರು?

Operation Sindoor ಮೇಲೆ ಹೊಸ ಸಿನಿಮಾ: ನಿರ್ದೇಶಕ ಯಾರು?

ವಿವೇಕ್ ಅಗ್ನಿಹೋತ್ರಿ ತೆರೆಗೆ ತರಲು ಸಜ್ಜಾಗಿದ್ದಾರೆ

ಭಾರತೀಯ ಸೇನೆಯ ವೀರತೆ, ಶೂರತೆ ಕುರಿತಾಗಿ ಬಾಲಿವುಡ್​ನಲ್ಲಿ ಹಲವಾರು ಸಿನಿಮಾಗಳು ಈ ವರೆಗೆ ಬಂದಿವೆ. ಈಗಲೂ ಬರುತ್ತಿವೆ. ಉರಿ ದಾಳಿಯ ಪ್ರತಿಯಾಗಿ ಮಾಡಲಾದ ಸರ್ಜಿಕಲ್ ಸ್ಟೈಕ್ ಅನ್ನು ಆಧರಿಸಿ ‘ಉರಿ’ ಹೆಸರಿನ ಸಿನಿಮಾ ಬಂದಿತ್ತು. ಇದೀಗ ಉಗ್ರರ ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಮಾಡಿದ ಆಪರೇಷನ್ ಸಿಂಧೂರ್ ಕುರಿತಾದ ಸಿನಿಮಾ ಬರಲಿದೆ. ಇದಕ್ಕಾಗಿ ತಯಾರಿ ಆರಂಭವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ ನಂತಹ ಸಿನಿಮಾಗಳನ್ನು ಮಾಡಿರುವ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ಆಪರೇಷನ್ ಸಿಂಧೂರ್ ಅನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.

2025ರ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪೆಹಲ್ಗಾಮ್​​ನಲ್ಲಿ ದಾಳಿ ಮಾಡಿದ್ದ ಉಗ್ರರು 26 ಮಂದಿ ಪ್ರವಾಸಿಗರನ್ನು ಕೊಂದಿದ್ದರು. ಅದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಟಾರ್ಗೆಟೆಡ್ ಅಟ್ಯಾಕ್ ಅನ್ನು ಮಾಡಿತ್ತು. ಇದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿತ್ತು. ಈ ದಾಳಿಯಲ್ಲಿ ಪಾಕಿಸ್ತಾನದ ಹಲವು ಉಗ್ರ ನೆಲೆಗಳು ಈ ದಾಳಿಯಲ್ಲಿ ಧ್ವಂಸವಾದವು ಎನ್ನಲಾಗಿದೆ. ಇದೇ ಆಪರೇಷನ್ ಸಿಂಧೂರ್ ಅನ್ನು ಇರಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ.

ವಿವೇಕ್ ಅಗ್ನಿಹೋತ್ರಿ ತಮ್ಮನ್ನು ತಾವು ರಾಷ್ಟ್ರೀಯವಾದಿ ನಿರ್ದೇಶಕ ಎಂದು ಕರೆದುಕೊಂಡಿದ್ದು, ಈ ಹಿಂದೆ ಅವರು ನಿರ್ದೇಶಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಭಾರಿ ಯಶಸ್ವಿ ಆಗುವ ಜೊತೆಗೆ ವಿವಾದವನ್ನೂ ಸಹ ಹುಟ್ಟು ಹಾಕಿತ್ತು. ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಕ್ಕೂ ಅದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಡಳಿತ ಪಕ್ಷದ ಪರವಾದ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಟೀಕೆ ವಿವೇಕ್ ಅವರ ಮೇಲಿದ್ದು, ಇದೀಗ ಅವರು ಸೈನ್ಯ ನಿರ್ದಿಷ್ಟ ಆಪರೇಷನ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *