Newyork || ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ : 5 ಸಾವು

ವಾಷಿಂಗ್ಟನ್‌: ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ, ಶಂಕಿತ ದಾಳಿಕೋರ ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನ್ಯೂಯಾರ್ಕ್‌ನ ಕೇಂದ್ರ ಮ್ಯಾನ್‌ಹ್ಯಾಟನ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್‌ ಅಧಿಕಾರಿ ಸೇರಿ ನಾಲ್ವರು ಸಾವನ್ನಪ್ಪಿದ್ದರು. ಆ ಬಳಿಕ ಬಂಧೂಕುದಾರಿ ಸ್ವಯಂ ಹಾನಿಯಿಂದ ಸಾವನ್ನಪ್ಪಿದ್ದಾನೆ. ಬಂಧೂಕುಧಾರಿಯನ್ನ ನೆವಾಡಾದ ಶೇನ್ ಟಮುರಾ (27) ಎಂದು ಗುರುತಿಸಿರುವುದಾಗಿ ವರದಿಗಳು ತಿಳಿಸಿವೆ

ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ ಪಟ್ಟಣವು NFL ಪ್ರಧಾನ ಕಚೇರಿ ಮತ್ತು ಹೆಡ್ಜ್ ಫಂಡ್, ಬ್ಲಾಕ್‌ಸ್ಟೋನ್ ಸೇರಿದಂತೆ ಹಲವಾರು ಪ್ರಮುಖ ಹಣಕಾಸು ಸಂಸ್ಥೆಗಳ ಕಚೇರಿಗಳನ್ನು ಹೊಂದಿರುವ ಸ್ಥಳವಾಗಿದೆ. ಅಲ್ಲದೇ ಪ್ರಮುಖ ಐಷಾರಾಮಿ ಹೋಟೆಲ್‌ಗಳೂ ಇಲ್ಲಿವೆ. ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 6:30ರ ಸುಮಾರಿಗೆ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಅಂಬುಲೆನ್ಸ್‌ ಹಾಗೂ ಭದ್ರತಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ.

ಇನ್ನೂ ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *