ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನಲ್ಲಿ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ಯೋಜನೆ ಅಡಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನರ್ಸ್, ಐಟಿ ಕಾರ್ಡಿನೇಟರ್ ಸೇರಿದಂತೆ ಒಟ್ಟು 84 ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗಿಯಾಗಬಹುದಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ
ಹುದ್ದೆ ವಿವರ: ಒಟ್ಟು 84 ಹುದ್ದೆಗಳ ನೇಮಕಾತಿ
- ನರ್ಸ್ – 10
- ಕ್ಲಿನಿಕಲ್ ಸೈಕಾಲಾಜಿಸ್ಟ್ – 11
- ಐಟಿ ಕಾರ್ಡಿನೇಟರ್ – 01
- ನ್ಯೂರೋ ನರ್ಸ್ -01
- ಸೈಕೋಥೆರಪಿಸ್ಟ್ – 02
- ಸ್ಪೀಚ್ ಥೆರಪಿಸ್ಟ್ -24
- ಡಿಸ್ಟ್ರಿಕ್ಟ್ ಕಾರ್ಡಿನೇಟರ್ -01
- ಮೆಡಿಕಲ್ ಸೋಷಿಯಲ್ ವರ್ಕರ್ – 01
- ಸೀನಿಯರ್ ರೆಸಿಡೆಂಟ್ ಮತ್ತು ಮೆಡಿಕಲ್ ಆಫೀಸರ್ -33
ವಿದ್ಯಾರ್ಹತೆ:
- ನರ್ಸ್ – ಬಿಎಸ್ಸಿ (ನರ್ಸಿಂಗ್)
- ಕ್ಲಿನಿಕಲ್ ಸೈಕಾಲಾಜಿಸ್ಟ್ – ಎಂಎ. ಎಂಎಸ್ಸಿ, ಎಂಫಿಲ್
- ಐಟಿ ಕೋರ್ಡಿನೇಟರ್ – ಐಟಿ, ಬಿಎಸ್ಸಿ, ಬಿಇ, ಬಿಸಿಎ, ಎಂಸಿಎ
- ನ್ಯೂರೋ ನರ್ಸ್ – ಎಂಎಸ್ಸಿ
- ಸೈಕೋಥೆರಪಿಸ್ಟ್ – ಪದವಿ
- ಸ್ಪೀಚ್ ಥೆರಪಿಸ್ಟ್ – ಪದವಿ
- ಡಿಸ್ಟ್ರಿಕ್ಟ್ ಕಾರ್ಡಿನೇಟರ್ – ಸ್ನಾತಕೋತ್ತರ ಪದವಿ
- ಮೆಡಿಕಲ್ ಸೋಷಿಯಲ್ ವರ್ಕರ್ – ಸ್ನಾತಕೋತ್ತರ ಪದವಿ
- ಸೀನಿಯರ್ ರೆಸಿಡೆಂಟ್ ಮತ್ತು ಮೆಡಿಕಲ್ ಆಫೀಸರ್ – ಎಂಬಿಬಿಎಸ್, ಎಂಡಿ,
ವಯೋಮಿತಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 45 ವರ್ಷವಾಗಿದೆ.
ಆಯ್ಕೆ: ಈ ಹುದ್ದೆಗಳನ್ನು ನೇರ ನೇಮಕಾತಿ ಸಂದರ್ಶನ (ವಾಕ್ ಇನ್ ಇಂಟರ್ವ್ಯೂ) ಮೂಲಕ ಆಯ್ಕೆ ಮಾಡಲಾಗುವುದು. ಜೂನ್ 18ರಿಂದ 24ರವರೆಗೆ ಬೆಳಗ್ಗೆ 9.30ರಿಂದ ಈ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಅಗತ್ಯ ಶೈಕ್ಷಣಿಕ ದಾಖಲೆ, ಅನುಭವ ಪತ್ರ ಸೇರಿದಂತೆ ಇತರ ದಾಖಲಾತಿಯೊಂದಿಗೆ ನಿಗದಿತ ಸಮಯದಲ್ಲಿ ಭಾಗಿಯಾಗಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ: ಬೋರ್ಡ್ ರೂಮ್, 4ನೇ ಮಹಡಿ, ಎನ್ಬಿಆರ್ಸಿ ಕಟ್ಟಡ, ನಿಮ್ಹಾನ್ಸ್, ಬೆಂಗಳೂರು.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು nimhans.ac.in ಭೇಟಿ ನೀಡಿ