ತನಿಖೆಯಾಗುವವರೆಗೆ ದರ್ಶನ್ ಮೇಲೆ ಕ್ರಮ ಇಲ್ಲ: ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿ ಅಧ್ಯಕ್ಷ

ಬೆಂಗಳೂರು: ನಿರ್ಮಾಪಕರು ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಹಾಗಾಗಿ ತನಿಖೆಯಾಗುವವರೆಗೆ ನಟ ದರ್ಶನ್ ವಿರುದ್ಧ ನಿಷೇಧ ಕ್ರಮವಿಲ್ಲ ಎಂದು ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಕಚೇರಿ ಬಳಿಯ ಇಂದಿರಾ ಭವನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಫಿಲಂ‌ ಚೇಂಬರ್ ಪದಾಧಿಕಾರಿಗಳು ಭೇಟಿಯಾದ ಬಳಿಕ ದರ್ಶನ್ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯಿಸಿ, “ಮಾಧ್ಯಮಗಳ ಮುಂದೆ ಮಾತನಾಡಿದ್ದೇವೆ. ಸಂಜಯ್ ದತ್, ಸಲ್ಮಾನ್ ಖಾನ್ ಬೇರೆ ಪ್ರಕರಣ. ಪೊಲೀಸರು ತನಿಖೆ ಮಾಡ್ತಿದ್ದಾರೆ. ಈಗಲೇ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲ್ಲ. ನಿರ್ಮಾಪಕರು ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಹಾಗಾಗಿ ತನಿಖೆಯಾಗುವವರೆಗೆ ಏನೂ ಕ್ರಮವಿಲ್ಲ” ಎಂದು ತಿಳಿಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು: ಇದೇ ವೇಳೆ ಮಾತನಾಡಿದ ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದ್, “ನೊಂದ ಕುಟುಂಬಕ್ಕೆ ಆಸರೆಯಾಗಬೇಕು. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡ್ತಿದ್ದೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ದರ್ಶನ್ ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಾವ್ಯಾರೂ ಅವರನ್ನು ಸಮರ್ಥನೆ ಮಾಡಲ್ಲ. ನಿರಪರಾಧಿ ಅನ್ನೋದು ಸಾಬೀತಾಗಲು ಇನ್ನೂ ಆರು ತಿಂಗಳು, ವರ್ಷ ಆಗಬಹುದು. ಅಲ್ಲಿಯವರೆಗೆ ಅವರೇ ಬರೋದಿಲ್ಲವಲ್ಲ. ನಾವು ಸಂತ್ರಸ್ಥರ ಪರವಾಗಿ ನಿಲ್ತೇವೆ. ಕ್ರಮ ತೆಗೆದುಕೊಳ್ಳುವ ಕೆಲಸ ಮಾಡ್ತೇವೆ” ಎಂದರು.‌

Leave a Reply

Your email address will not be published. Required fields are marked *