ಸ್ಟ್ರಾಬೆರಿಗಳನ್ನು ರುಚಿಗೆ ಮಾತ್ರವಲ್ಲದೆ ಪೋಷಕಾಂಶಗಳಿಗಾಗಿಯೂ ಸೇವಿಸಬಹುದು. ಇದು ವಿಟಮಿನ್ ಸಿ, ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.
ದೃಷ್ಟಿ ಸುಧಾರಣೆ: ಇದು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಅಂತೆಯೇ, ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ತಡೆಯಬಹುದು.
ಹೃದಯಕ್ಕೆ ಒಳ್ಳೆಯದು: ಸ್ಟ್ರಾಬೆರಿಗಳು ಫ್ಲೇವನಾಯ್ಡ್, ಪೊಟ್ಯಾಸಿಯಮ್ ಮತ್ತು ಫೈಬರ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಹೃದಯಕ್ಕೂ ಒಳ್ಳೆಯದು.
ತೂಕ ಇಳಿಕೆ: ಸ್ಟ್ರಾಬೆರಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹಣ್ಣು. ಇದನ್ನು ತಿನ್ನುವುದರಿಂದ ದೀರ್ಘಕಾಲ ಹಸಿವಾಗದಂತೆ ಮಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುತ್ತಾ ಬಂದರೆ ತೂಕ ಇಳಿಕೆ ಸುಲಭವಾಗಿ ಆಗುತ್ತದೆ. ಊಟಕ್ಕೆ ಮುನ್ನ ತಿಂದರೆ ಅತಿಯಾದ ಆಹಾರ ಸೇವನೆಯನ್ನು ನಿಯಂತ್ರಣ ಮಾಡಬಹುದು.
ರೋಗನಿರೋಧಕ ಶಕ್ತಿ: ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ.