ಇಡಿಗೆ ಹೆದರುವುದಿಲ್ಲ, ನಿಮ್ಮನ್ನು ಬಲಿ ಹಾಕಿಯೇ ಸಿದ್ಧ: ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ

“ನಾವು ಇಡಿಗೆ, ಬಿಜೆಪಿಗೆ ಹೆದರುವುದಿಲ್ಲ. ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ. ನಿಮ್ಮನ್ನು ಬಲಿ ಹಾಕಿಯೇ ಸಿದ್ಧ” ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಿಗೆ ಗುಡುಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ನಡೆದ ರ‍್ಚೆಗೆ ಅವರು ಇಂದು ಕಲಾಪದಲ್ಲಿ ಉತ್ತರ ನೀಡಿದರು.

ʼʼನೀವು ಕಳ್ಳರು, ಲೂಟಿಕೋರರು ಎಂದು ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ. ತಾಕತ್ ಇದ್ಯಾ ಅಂದವರು 64ಕ್ಕೆ ಬಂದಿರಿ. ನಾವು 136 ಶಾಸಕರು ಗೆದ್ದು ಬಂದೆವು. ಬೊಮ್ಮಾಯಿ- ಯಡಿಯೂರಪ್ಪ ಆಡಳಿತಾವಧಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣಗಳು ನಡೆದಿವೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸುತ್ತೇವೆ. ಯಾರು ತಪ್ಪು ಮಾಡಿದ್ದರೋ ಅವರನ್ನು ಜೈಲಿಗೆ ಕಳುಹಿಸುತ್ತೇವೆ. ನಿಮ್ಮನ್ನು ಬಲಿ ಹಾಕಿಯೇ ಸಿದ್ಧ” ಎಂದು ಸಿಎಂ ಹೇಳಿದರು.

ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿರುವುದು 89 ಕೋಟಿ ಮಾತ್ರ. ಅದನ್ನು ವಾಪಸು ತರುವ ಕೆಲಸ ಮಾಡ್ತಿದ್ದೇವೆ. ನಾವು ಯಾರನ್ನು ಸಹ ರಕ್ಷಣೆ ಮಾಡುವುದಿಲ್ಲ. ಇವರ ಕಾಲದಲ್ಲಿ ನಡೆದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಇವರು ಹೀಗೆ ಮಾಡುತ್ತಿದ್ದಾರೆ. ನಾವು ಈ ಬಿಜೆಪಿ ಹಾಗೂ ಇಡಿಗೆ ಹೆದರುವುದಿಲ್ಲ ಎಂದು ಸಿಎಂ ನುಡಿದರು. ಸಿಎಂ ಭಾಷಣಕ್ಕೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿ ಅಡ್ಡಿ ಒಡ್ಡಿದರು.

ʼಬೊಮ್ಮಾಯಿ ಕಾಲದಲ್ಲಿ ಹಗರಣ ಆಗಿದೆ. ದೇವರಾಜ ಅರಸು ಟ್ರಕ್ ರ‍್ಮಿನಲ್ 50 ಕೋಟಿ ಅವ್ಯವಹಾರ ಆಗಿದೆ. ವೀರಯ್ಯ ಬಂಧನವಾಗಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ?ʼ ಎಂದ ಸಿಎಂ ಬಿಜೆಪಿ ಕಾಲದ 21 ಹಗರಣಗಳ ದಾಖಲೆ ಬಿಡುಗಡೆ ಮಾಡಿದರು. ಕಿಯೋನಿಕ್ಸ್‌ನಲ್ಲಿ 500 ಕೋಟಿ ಅವ್ಯವಹಾರ ಆಗಿದೆ. ಆಗ ಯಡಿಯೂರಪ್ಪ ಸಿಎಂ, ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ಕೋವಿಡ್ ಹಗರಣ, ಭದ್ರಾ ಮೇಲ್ದಂಡೆ ಯೋಜನೆ ಸೇರಿ 40 ಸಾವಿರ ಕೋಟಿ ಹಗರಣ ನಡೆದಿದೆ. ಪಿಎಸ್ಐ ಹಗರಣ ಯಾರ ಕಾಲದಲ್ಲಿ ನಡೆಯಿತು? 40% ಕಮಿಷನ್ ಹಗರಣ ಸಿಎಂ ಬೊಮ್ಮಾಯಿ ಕಾಲದಲ್ಲಿ. ಕರ‍್ಕಳ ಪರುಶುರಾಮ ಥೀಮ್ ಪರ‍್ಕ್ ಹಗರಣ, ಬಿಟ್ ಕಾಯಿನ್ ಹಗರಣ ನಡೆಯಿತು. 750 ಕೋಟಿಗೂ ಹೆಚ್ಚು ಹಣ ಯಡಿಯೂರಪ್ಪ ಆಪ್ತರ ಬಳಿ ಸಿಕ್ಕಿತು. ಇಡಿ ಮತ್ತು ಸಿಬಿಐ ಬರಲಿಲ್ಲ. ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ಟರು. ಕೆಕೆಆರ್‌ಡಿಬಿ 200 ಕೋಟಿ ಹಗರಣ ನಡೆಯಿತು. ಆಗ ಕಂದಾಯ ಹಗರಣ ಆಶೋಕ್ ಸಚಿವರಾಗಿದ್ದರುʼ ಎಂದು ಸಿಎಂ ವಿವರಿಸಿದರು.

Leave a Reply

Your email address will not be published. Required fields are marked *