ನಾಲ್ಕಲ್ಲ, ಎರಡೇ ಸ್ಲ್ಯಾಬ್; ಸರ್ಕಾರ ತರುತ್ತಿದೆ ಹೊಸ GST ಸುಧಾರಣೆ; ಇಲ್ಲಿದೆ ಟ್ಯಾಕ್ಸ್ ದರ ಕಡಿಮೆ ಆಗುವ ಸರಕುಗಳು

ನಾಲ್ಕಲ್ಲ, ಎರಡೇ ಸ್ಲ್ಯಾಬ್; ಸರ್ಕಾರ ತರುತ್ತಿದೆ ಹೊಸ GST ಸುಧಾರಣೆ; ಇಲ್ಲಿದೆ ಟ್ಯಾಕ್ಸ್ ದರ ಕಡಿಮೆ ಆಗುವ ಸರಕುಗಳು

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಮತ್ತು ಸರಳಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ತಳೆದಿದೆ. ವರದಿಗಳ ಪ್ರಕಾರ ಜಿಎಸ್​ಟಿ ದರಗಳು ಗಣನೀಯವಾಗಿ ತಗ್ಗಲಿವೆ. ದರ ಕಡಿಮೆಗೊಳ್ಳಲಿರುವುದು ಮಾತ್ರವಲ್ಲ, ಟ್ಯಾಕ್ಸ್ ಸ್ಲ್ಯಾಬ್​ಗಳ ಸಂಖ್ಯೆಯೂ ಕಡಿಮೆ ಆಗಬಹುದು. ನಾಲ್ಕು ಇದ್ದ ಜಿಎಸ್​ಟಿ ಸ್ಲ್ಯಾಬ್​ಗಳನ್ನು ಎರಡಕ್ಕೆ ಇಳಿಸಲು ಸರ್ಕಾರ ಯೋಜಿಸಿದೆ. ಅಷ್ಟೇ ಅಲ್ಲ, ಮುಂಬರುವ ವರ್ಷಗಳಲ್ಲಿ ಒಂದು ರಾಷ್ಟ್ರ ಒಂದು ತೆರಿಗೆ ದರ ಎನ್ನುವ ನೀತಿ ಜಾರಿಗೆ ಬರಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯ ಸ್ವಾತಂತ್ರ್ಯೋತ್ಸವ ಭಾಷದಲ್ಲಿ ಮುಂದಿನ ತಲೆಮಾರಿನ ಜಿಎಸ್​ಟಿ ಸುಧಾರಣೆ ತರುತ್ತಿರುವುದಾಗಿಯೂ ಹೇಳಿದ್ದರು.

ಎರಡು ಸ್ಲ್ಯಾಬ್​ಗಳು ಮಾತ್ರ ಇರಲಿವೆ…

ಸದ್ಯ ಜಿಎಸ್​ಟಿ ಸಿಸ್ಟಂನಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್​ಗಳಿವೆ. ಶೇ. 5, ಶೇ. 12, ಶೇ. 18 ಮತ್ತು ಶೇ. 28 ಟ್ಯಾಕ್ಸ್ ಸ್ಲ್ಯಾಬ್ ದರಗಳಿವೆ. ಇವುಗಳ ಪೈಕಿ ಶೇ. 5 ಮತ್ತು ಶೇ. 18 ಅನ್ನು ಮಾತ್ರವೇ ಉಳಿಸಿಕೊಳ್ಳಲಾಗುವುದು ಎಂದು ಸರ್ಕಾರ ಪ್ರಸ್ತಾಪ ಮಾಡಿದೆ. ಶೇ. 12ರ ಟ್ಯಾಕ್ಸ್ ಸ್ಲ್ಯಾಬ್​ನಲ್ಲಿರುವ ಸರಕುಗಳನ್ನು ಶೇ. 5ರ ಸ್ಲ್ಯಾಬ್​ಗೆ ತರಬಹುದು. ಇನ್ನುಳಿದವನ್ನು ಶೇ. 18ರ ಟ್ಯಾಕ್ಸ್ ಸ್ಲ್ಯಾಬ್​ಗೆ ತರುವ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ತಂಬಾಕು, ಮದ್ಯದಂತಹ ಪಾಪದ ಸರಕುಗಳಿಗೆ ಶೇ. 40ರಷ್ಟು ಸಿನ್ ಟ್ಯಾಕ್ಸ್ ಹಾಕಬಹುದು.

ಸರ್ಕಾರಕ್ಕೆ ಸಾಕಷ್ಟು ತೆರಿಗೆ ಆದಾಯ ನಷ್ಟ

ಶೇ. 12 ಮತ್ತು ಶೇ. 28ರ ಟ್ಯಾಕ್ಸ್ ಸ್ಲ್ಯಾಬ್​ಗಳನ್ನು ತೆಗೆದುಹಾಕುವುದರಿಂದ ಹಲವಾರು ವಸ್ತುಗಳಿಗೆ ಜಿಎಸ್​ಟಿ ದರ ಗಣನೀಯವಾಗಿ ಇಳಿಕೆ ಆಗಲಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ನಷ್ಟ ಆಗಬಹುದು.

ಜಿಎಸ್​ಟಿ ದರ ಇಳಿಕೆಯಾಗಲಿರುವ ಸರಕುಗಳು

ಶೇ. 12ರಿಂದ ಶೇ. 5ರ ಜಿಎಸ್​ಟಿಗೆ ಇಳಿಯಬಹುದಾದ ವಸ್ತುಗಳು: ಹಣ್ಣಿನ ಜ್ಯೂಸ್, ಡ್ರೈಫ್ರೂಟ್, ಬೆಣ್ಣೆ ಇತ್ಯಾದಿ ವಸ್ತುಗಳು.

ಶೇ. 28ರಿಂದ ಶೇ. 18ಕ್ಕೆ ಟ್ಯಾಕ್ಸ್ ಇಳಿಯಬಹುದಾದ ಸರಕುಗಳು: ಎಸಿ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸಿಮೆಂಟ್ ಇತ್ಯಾದಿ.

ಸರ್ಕಾರದ ಲೆಕ್ಕಾಚಾರ ಏನು?

ಜಿಎಸ್​ಟಿ ದರಗಳನ್ನು ಇಳಿಸುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ ಮೊತ್ತದ ಟ್ಯಾಕ್ಸ್ ಆದಾಯ ಕಡಿಮೆ ಆಗುತ್ತದೆ. ಆದರೆ, ಜನರಿಗೆ ಟ್ಯಾಕ್ಸ್ ಹೊರೆ ಕಡಿಮೆ ಆಗುವುದರಿಂದ ಅನುಭೋಗ ಹೆಚ್ಚಬಹುದು. ಅದರ ಪರಿಣಾಮವಾಗಿ ಆರ್ಥಿಕತೆಗೆ ಪುಷ್ಟಿ ಸಿಗಬಹುದು ಎಂಬುದು ಸರ್ಕಾರ ಎಣಿಕೆ. ಹೀಗಾಗಿ, ದಿಟ್ಟವಾಗಿ ಜಿಎಸ್​ಟಿ ಸುಧಾರಣೆ ತರಲು ಸರ್ಕಾರ ಹೆಜ್ಜೆ ಹಾಕಿರಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *