ಬೆಂಗಳೂರು : ಬೆಂಗಳೂರು ಪೂರ್ವದ ಕೆಆರ್ ಡಿಪೆನ್ಸ್ ಬಡಾವಣೆಯಲ್ಲಿ ಸೆಪ್ಟೆಂಬರ್ 3ರ ಮಧ್ಯರಾತ್ರಿ ನಡೆದಿದ್ದ spine-chilling ಘಟನೆ ಈಗ ಬೆಳಕಿಗೆ ಬಂದಿದೆ. ನಗ್ನನಾಗಿದ್ದ ಕಾಮುಕನೊಬ್ಬ, ತಾಯಿ-ಮಗಳು ಮಾತ್ರವಿದ್ದ ಮನೆಯ ಬಾಗಿಲು ಬಡಿದು ರಾತ್ರಿಯ ಮೌನವನ್ನು ಭೀಕರ ಮಾಡಿದ್ದಾನೆ.
ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ
ಸಿಕ್ಕಾಪಟ್ಟೆ ಗಲಾಟೆ ಮಾಡಿದ ಕಾಮುಕನ ದಾಂಧಲೆ ಸಿಸಿಟಿವಿ ಫುಟೇಜ್‌ನಲ್ಲಿ ಸೆರೆಯಾಗಿದೆ.
ಹೆಚ್ಚಿನ ಆತಂಕದ ವಿಷಯವೆಂದರೆ –
- ಕೈಯಲ್ಲಿ ಗುದ್ದಲಿ ಹಿಡಿದು ಮನೆ ಬಳಿಗೆ ಬಂದಿದ್ದ ಕಾಮುಕ,
- ಬಾಗಿಲು ಬಡಿದು ರೇಪ್ ಮಾಡುವ ಬೆದರಿಕೆ ನೀಡಿದ್ದಾನೆ,
- ಮನೆಬಾಗಿಲು ತೆರೆಯದ ಕಾರಣ, ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಾನೆ.
ತಾಯಿ-ಮಗಳ ಕಿರುಚಾಟಕ್ಕೆ ಸ್ಥಳೀಯರು ಧಾವನೆ
ಅದೃಷ್ಟವಶಾತ್, ಮನೆಯ ಹಿಂದಿನ ಬಾಗಿಲಿನಿಂದ ಮಹಿಳೆ ಕಿರುಚಾಡುತ್ತಿದ್ದ ದ್ವನಿ ಹೊರಗಿನವರಿಗೆ ಕೇಳಿಬಂದಿದೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ಕಾಮುಕನನ್ನು ಸ್ಥಳದಲ್ಲೇ ಹಿಡಿದು, ಆವಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಪ್ರಕರಣ ದಾಖಲು
ಈ ಕುರಿತು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಕಾಮುಕನ ಮನೋಸ್ಥಿತಿ, ಪೂರ್ವ ಇತಿಹಾಸ ಹಾಗೂ ಇತರ ಅಪರಾಧ ಸಂಬಂಧಿಸಿದ ವಿವರಗಳನ್ನು ಪತ್ತೆ ಹಚ್ಚಲಾಗುತ್ತಿದೆ.
ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆ!
ಇಂತಹ ಘಟನೆಗಳು ಪುನಃ ಮಹಿಳೆಯರ ನಿತ್ಯ ಬದುಕಿನಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿವೆ. ರಾತ್ರಿಯಲ್ಲಿ ಮಹಿಳೆಯರು ಸುರಕ್ಷಿತವೆಂಬ ಭರವಸೆಯೇ ಇಲ್ಲದಂತಾಗಿದೆ ಎಂಬ ಗಂಭೀರ ಚರ್ಚೆಗೆ ಇದು ದಾರಿ ಮಾಡಿಕೊಡುತ್ತಿದೆ.
For More Updates Join our WhatsApp Group :