ಪುರಿ: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆ ನಡೆಯುತ್ತಿತ್ತು. ಇಲ್ಲಿಗೆ ಬಾಣಂತಿಯೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಒಳಗೆ ಆ ಮಹಿಳೆ ಪರೀಕ್ಷೆ ಬರೆಯುವಾಗ ಆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಇದರಿಂದ ಒಳಗಿದ್ದ ಅಮ್ಮನಿಗೆ ಸಂಕಟವಾಗಿ ಪರೀಕ್ಷೆಯತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಆ ತಾಯಿಗೆ ಸಹಾಯ ಮಾಡಲು ಮುಂದಾದ ಒಡಿಶಾ ಮಹಿಳಾ ಕಾನ್‌ಸ್ಟೆಬಲ್ ತಾನೇ ಆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು, ಎದೆಹಾಲುಕುಡಿಸಿ, ನಿದ್ರೆ ಮಾಡಿಸುವ ಮೂಲಕ ತಾಯ್ತನ ಮತ್ತು ಮಾನವೀಯತೆ ಮೆರೆದಿದ್ದಾರೆ.
ಹಾಲು ಕುಡಿದ ಆ ಮಗು ಅಳುವುದು ನಿಲ್ಲಿಸಿ ಆ ಪೊಲೀಸ್ ಮಡಿಲಲ್ಲೇ ನಿದ್ರೆ ಮಾಡಿದೆ. ನೇಮಕಾತಿ ಪರೀಕ್ಷೆಯ ವೇಳೆ ಭದ್ರತೆಗೆ ಬಂದಿದ್ದ ಪೊಲೀಸ್ ಕಾನ್ಸ್ಟೆಬಲ್ ಆ ಮಗುವಿಗೆ ಹಾಲುಣಿಸಿ, ತಾಯ್ತನ ತೋರಿದ ಘಟನೆಯ ಬಗ್ಗೆ ಒಡಿಶಾ ಪೊಲೀಸ್ ಇಲಾಖೆ ಎಕ್ಸ್ನಲ್ಲಿ ಮಾಹಿತಿ ನೀಡಿದೆ. ಮಹಿಳಾ ಕಾನ್‌ಸ್ಟೆಬಲ್ ರಜನಿ ಮಾಝಿ ಗಂಟೆಗಟ್ಟಲೆ ಅಳುತ್ತಿದ್ದ ಮಗುವಿಗೆ ಹಾಲುಣಿಸಿ ಸಾಂತ್ವನ ಹೇಳಿದ್ದಾರೆ. ಇದರಿಂದ ತಾಯಿ ನೆಮ್ಮದಿಯಿಂದ ಪರೀಕ್ಷೆ ಬರೆದು ಹೊರಬಂದಿದ್ದಾರೆ.
ಈ ಘಟನೆ ಭಾನುವಾರ ಬಿಬಿಗುಡಾ ಪರೀಕ್ಷಾ ಕೇಂದ್ರದಲ್ಲಿ ಆರ್‌ಐ ಮತ್ತು ಅಮೀನ್ ನೇಮಕಾತಿ ಪರೀಕ್ಷೆಗಳ ಸಮಯದಲ್ಲಿ ನಡೆಯಿತು. ಈ ಪರೀಕ್ಷೆಗೆ ಹಾಜರಾಗುತ್ತಿದ್ದ ಭೈರವಿ ಮಂಡಲ್ ಎಂಬ ಮಹಿಳೆ ತನ್ನ ಒಂದೂವರೆ ತಿಂಗಳ ಮಗು ಪರೀಕ್ಷಾ ಕೇಂದ್ರದ ಹೊರಗೆ ತನ್ನ ಮಗು ಜೋರಾಗಿ ಅಳುತ್ತಿದ್ದುದರಿಂದ ಪರೀಕ್ಷೆ ಬರೆಯಲಾಗದೆ ಚಡಪಡಿಸುತ್ತಿದ್ದರು. ಆ ಶಿಶುವನ್ನು ಸಮಾಧಾನಪಡಿಸಲು ಆಕೆಯ ಪತಿ ಪ್ರಯತ್ನಿಸಿದರೂ ಅದು ಸುಮ್ಮನಾಗಲಿಲ್ಲ. ಇದರಿಂದ ಆಕೆ ಪರೀಕ್ಷೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೊರಗೆ ಬರಲು ಯೋಚಿಸಿದ್ದರು.
For More Updates Join our WhatsApp Group :
