ಆನ್ಲೈನ್ ಡೇಟಿಂಗ್ ವಂಚನೆ – 63 ವರ್ಷದ ವ್ಯಕ್ತಿ 32 ಲಕ್ಷ ರೂ. ಕಳೆದುಕೊಂಡು ಶೋಕಿಂಗ್ ಘಟನೆ.

ಆನ್ಲೈನ್ ಡೇಟಿಂಗ್ ವಂಚನೆ – 63 ವರ್ಷದ ವ್ಯಕ್ತಿ 32 ಲಕ್ಷ ರೂ. ಕಳೆದುಕೊಂಡು ಶೋಕಿಂಗ್ ಘಟನೆ.

ಬೆಂಗಳೂರು: ಆನ್​ಲೈನ್​ ಡೇಟಿಂಗ್ ಹೆಸರಲ್ಲಿ​ ವಂಚನೆಗೆ ಒಳಗಾಗಿ 63 ವರ್ಷದ ವ್ಯಕ್ತಿಯೋರ್ವರು ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೊರಮಾವು ನಿವಾಸಿಗೆ ಹೈ-ಪ್ರೊಫೈಲ್​ ಮಹಿಳೆಯರೊಂದಿಗೆ ಸಂಪರ್ಕ ಮಾಡಿಸುವ ಆಸೆ ತೋರಿಸಿ ವಂಚಕರು ಬರೋಬ್ಬರಿ 32 ಲಕ್ಷಕ್ಕಿಂತ ಅಧಿಕ ಹಣವನ್ನು ದೋಚಿದ್ದಾರೆ. ಅಂತಿಮವಾಗಿ ತಾನು ಮೋಸ ಹೋಗಿದ್ದೇನೆ ಎಂದು ಅರಿತ ವ್ಯಕ್ತಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

CEN ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಸೆಪ್ಟೆಂಬರ್​ 5ರಿಂದ ಅಕ್ಟೋಬರ್​ 18ರ ಅವಧಿಯಲ್ಲಿ ಈ ವಂಚನೆ ನಡೆದಿದೆ. ವಂಚನೆಗೊಳೆಗಾದ ವ್ಯಕ್ತಿಗೆ ಡೇಟಿಂಗ್​ ಸೇವೆ ಹೆಸರಲ್ಲಿ ಕರೆ ಬಂದಿದ್ದು, ಮಹಿಳೆಯರ ಜೊತೆ ಭೇಟಿ ಮಾಡಿಸುವ ಬಗ್ಗೆ ತಿಳಿಸಲಾಗಿದೆ. ಅಲ್ಲದೆ, ನೋಂದಣಿ ಶುಲ್ಕ ಎಂದು 1,950 ರೂ.ಗಳನ್ನ ಆನ್​ಲೈನ್​ ಮೂಲಕ ವಂಚಕರು ಪಾವತಿ ಮಾಡಿಸಿಕೊಂಡಿದ್ದಾರೆ. ಬಳಿಕ ವಾಟ್ಸ್ಯಾಪ್​ನಲ್ಲಿ ಮೂವರು ಮಹಿಳೆಯರ ಫೋಟೋವನ್ನು ಕಳುಹಿಸಲಾಗಿದ್ದು, ಆ ಪೈಕಿ ಒಬ್ಬರನ್ನು ವ್ಯಕ್ತಿ ಆಯ್ಕೆ ಮಾಡಿದ್ದರು. ಅವರು ಸೆಲೆಕ್ಟ್​ ಮಾಡಿದ್ದ ರಿತಿಕಾ ಹೆಸರಿನ ಮಹಿಳೆಯ ದೂರವಾಣಿ ಸಂಖ್ಯೆಯನ್ನ ಶೇರ್​ ಮಾಡಲಾಗಿತ್ತು. ಬಳಿಕ ರಿತಿಕಾ ಮತ್ತು ವ್ಯಕ್ತಿಯ ನಡುವೆ ಸಂವಹನ ಆರಂಭವಾಗಿದ್ದು, ಆತ್ಮೀಯತೆಯೂ ಬೆಳೆದಿತ್ತು. ನಿಮ್ಮನ್ನು ಬೇಗ ಭೇಟಿಯಾಗುವುದಾಗಿ ರಿತಿಕಾ ಕೂಡ ತಿಳಿಸಿದ್ದಳು ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *