ಉಪಲೋಕಾಯುಕ್ತರಿಗೂ ಆನ್​​ಲೈನ್ ಶಾಪಿಂಗ್ ಮೋಸ!

ಉಪಲೋಕಾಯುಕ್ತರಿಗೂ ಆನ್​​ಲೈನ್ ಶಾಪಿಂಗ್ ಮೋಸ!

ರೇಜರ್ ಬ್ಲೇಡ್ ಕೇಳಿದ್ದರೇ, ಹಳೆಯ ಬಟ್ಟೆ ತುಂಡು  ತಲುಪಿದೆ.

ಬೆಂಗಳೂರು : ಕರ್ನಾಟಕದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ಅವರೇ ಆನ್‌ಲೈನ್ ಶಾಪಿಂಗ್ ಮೋಸಕ್ಕೆ ಬಲಿಯಾಗುವಂತಾಗಿದೆ. ಅವರು ಗುಡ್ ಮ್ಯಾಕ್ಸ್ ಕಂಪನಿಯ ರೇಜರ್ ಬ್ಲೇಡ್‌ಗಳನ್ನು ಆನ್​ಲೈನ್ ಮೂಲಕ ಆರ್ಡರ್ ಮಾಡಿದ್ದರು. ಶ್ಯಾಡೋಫ್ಯಾಕ್ಸ್ ಮುಖಾಂತರ ಬಂದ ಪಾರ್ಸೆಲ್ ಅನ್ನು ತೆರೆದಾಗ, ಅದರಲ್ಲಿ ರೇಜರ್ ಬ್ಲೇಡ್‌ಗಳ ಬದಲು ಹಳೆಯ ಬಟ್ಟೆಗಳು ಪತ್ತೆಯಾಗಿವೆ! ಈ ಘಟನೆಯು ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉಪಲೋಕಾಯುಕ್ತರಂತಹ ಉನ್ನತ ಹುದ್ದೆಯಲ್ಲಿರುವವರೇ ಇಂತಹ ವಂಚನೆಗೆ ಗುರಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ, ಗುಡ್ ಮ್ಯಾಕ್ಸ್ ಕಂಪನಿ, ಡೆಲಿವರಿ ಸೇವೆ ಒದಗಿಸಿದ ಶ್ಯಾಡೋಫ್ಯಾಕ್ಸ್ ಕಂಪನಿ ಹಾಗೂ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *