ಬೆಂಗಳೂರು : ರಾಜ್ಯದ ರೈತರು ಎದುರಿಸುತ್ತಿರುವ ಯೂರಿಯಾ ಅಭಾವದ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿಕೆ ಸುರೇಶ್, ಯೂರಿಯಾ ಕರ್ನಾಟಕದಲ್ಲಿ ತಯಾರಾಗಲ್ಲ, ಅದನ್ನು ರಾಜ್ಯಗಳಿಗೆ ಸರಬರಾಜು ಮಾಡಬೇಕಿರುವುದು ಕೇಂದ್ರ ಸರ್ಕಾರ, ರಾಜ್ಯದ ಮುಖ್ಯಮಂತ್ರಿಯವರು ಈಗಾಗಲೇ ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂದು ಹೇಳಿದರು.
ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ಮಂತ್ರಿಗಳೆಲ್ಲ ಅಧಿವೇಶನದಲ್ಲಿ ಸಿಗುತ್ತಾರೆ, ಈ ಭಾಗದ ಜನನಾಯಕರು ಸಂಬಂಧಪಟ್ಟವರನ್ನು ಭೇಟಿಯಾಗಿ ಯೂರಿಯಾ ಬಿಡುಗಡೆಗೆ ಅಗ್ರಹಿಸಬೇಕೆಂದು ಸುರೇಶ್ ಹೇಳಿದರು.