ಕನ್ನಡ ಕಲಾವಿದರಿಗೆ ಈಗ ಸಾಕಷ್ಟು ಬೇಡಿಕೆ ಬರುತ್ತಿದೆ.
ಕನ್ನಡ ಕಲಾವಿದರಿಗೆ ಈಗ ಸಾಕಷ್ಟು ಬೇಡಿಕೆ ಬರುತ್ತಿದೆ. ಅನೇಕ ಸ್ಟಾರ್ ಕಲಾವಿದರು ಪರಭಾಷೆಗೆ ತೆರಳಿ ಅತಿಥಿ ಪಾತ್ರ ಮಾಡಿದ್ದು ಇದೆ. ಶಿವರಾಜ್ಕುಮಾರ್ ಅವರು ‘ಜೈಲರ್’ ಅಲ್ಲಿ, ಉಪೇಂದ್ರ ಅವರು ‘ಕೂಲಿ’ ಚಿತ್ರದಲ್ಲಿಅತಿಥಿ ಪಾತ್ರ ಮಾಡಿದ್ದಾರೆ. ಅತಿಥಿ ಪಾತ್ರಗಳ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ನಮ್ಮ ಕಲಾವಿದರು ಅಲ್ಲಿಗೆ ತೆರಳಿ ಅತಿಥಿ ಪಾತ್ರ ಮಾಡುವ ಬಗ್ಗೆ ಅವರಿಗೆ ಯಾವುದೇ ತಕರಾರು ಇಲ್ಲ. ಆದರೆ, ಅಲ್ಲಿಯವರು ಇಲ್ಲಿಗೆ ಬರೋದಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ.
ಈ ಬಗ್ಗೆ ಸಂದರ್ಶನ ಒಂದರಲ್ಲಿ ಸುದೀಪ್ ಮಾತನಾಡಿದ್ದಾರೆ. ‘ನಾವು ಕನ್ನಡ ಕಲಾವಿದರು ಬೇರೆ ಭಾಷೆಗಳಲ್ಲಿ ಸಾಕಷ್ಟು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಆದರೆ, ಬೇರೆ ಭಾಷೆಯವರು ನಮ್ಮ ಸಿನಿಮಾಗಳಲ್ಲಿ ನಟಿಸಲು ಸಿದ್ಧರಿರುವುದಿಲ್ಲ’ ಎಂದಿದ್ದಾರೆ ಸುದೀಪ್.
‘ನಮ್ಮ ಸಿನಿಮಾಗಳಲ್ಲಿ ನಟಿಸುವಂತೆ ನಾನು ವೈಯಕ್ತಿಕವಾಗಿ ಕೆಲವು ನಟರನ್ನು ಕೇಳಿಕೊಂಡೆ. ಆದರೆ, ಅದು ಸಾಧ್ಯವಾಗಿಲ್ಲ. ಇದು ಎರಡೂ ಕಡೆಗಳಿಂದ ಹಾಕಬೇಕಾದ ಶ್ರಮ. ಆದರೆ, ಈಗ ನನಗೆ ಅದು ಕಾಣಿಸುತ್ತಿಲ್ಲ’ ಎಂದು ಸುದೀಪ್ ಅವರು ಬೇಸರ ಮಾಡಿಕೊಂಡಿದ್ದಾರೆ.
ಕನ್ನಡದ ಕಲಾವಿದರು ಪರಭಾಷೆಯಲ್ಲಿ ನಟಿಸೋದನ್ನು ಸಾಕಷ್ಟು ಕಾಣಬಹುದು. ಆದರೆ, ಅವರು ಇಲ್ಲಿ ಬಂದು ನಟಿಸಿದ್ದು ಕಡಿಮೆ. ಸುದೀಪ್ ಅವರು ಕೂಡ ಈ ಮೊದಲು ಅತಿಥಿ ಪಾತ್ರ ಮಾಡಿದ್ದರು. ‘ಬಾಹುಬಲಿ’ ಸಿನಿಮಾದಲ್ಲಿ ಅವರು ಅತಿಥಿ ಕಲಾವಿದರಾಗಿ ನಟಿಸಿದ್ದರು.
ಸದ್ಯ ಸುದೀಪ್ ಹೇಳಿದ ಮಾತನ್ನು ಅನೇಕರು ಬೆಂಬಲಿಸಿದ್ದಾರೆ. ಸಂಜಯ್ ದತ್ ಸೇರಿದಂತೆ ಅನೇಕ ಕಲಾವಿದರು ದೊಡ್ಡ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಯಾರೊಬ್ಬರೂ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುತ್ತಿಲ್ಲ.
For More Updates Join our WhatsApp Group :




