ಕೊರಟಗೆರೆ : ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರವಾದ ಕೊರಟಗೆರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಭಾರಿ ಹಣಾಹಣಿ ಏರ್ಪಟ್ಟಿದೆ.
ಅನುಸೂಚಿತ ಮಹಿಳೆಗೆ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ನಿಗದಿಯಾಗಿದೆ. ಜೆಡಿಎಸ್‌ನ ಏಕೈಕ ಮಹಿಳೆ ಮೀಸಲಾತಿಗೆ ಅನ್ವಯವಾಗುವುದರಿಂದ ಬಹುತೇಕ ಜೆಡಿಎಸ್ ಅಭ್ಯರ್ಥಿಯಾಗಿ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲದೊAದಿಗೆ ಅನಿತಾ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಆದರೂ ಕಾಂಗ್ರೆಸ್ ಸದಸ್ಯರು ಕೊನೆ ಹಂತದಲ್ಲಿ ಗೃಹ ಸಚಿವರ ಮಾರ್ಗದರ್ಶನದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಾಂಗ್ರೆಸ್‌ಗೆ ಕರೆತಂದು ಕಾಂಗ್ರೆಸ್ ಬಾವುಟ ಆರಿಸುವ ಒಳ ತಂತ್ರಗಾರಿಕೆ ನಡೆಸುತ್ತಿರುವುದರ ಬಗ್ಗೆ ಮಾತುಗಳು ಕೇಳಿಬಂದಿವೆ.
ಕೊರಟಗೆರೆ ಪಟ್ಟಣ ಪಂಚಾಯಿತಿ ೧೫ ಸದಸ್ಯ ಬಲ ಹೊಂದಿದ್ದು, ೭ ಜೆಡಿಎಸ್, ೧ ಪಕ್ಷೇತರ, ೧ ಬಿಜೆಪಿ ಹಾಗೂ ೫ ಕಾಂಗ್ರೆಸ್ ಸದಸ್ಯ ಬಲವಿದೆ. ಈ ಹಿಂದೆ ಜೆಡಿಎಸ್ ೭, ಬಿಜೆಪಿ ಅಭ್ಯರ್ಥಿ | ಹಾಗೂ ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು ೯ ಸದಸ್ಯರು ಒಗ್ಗೂಡಿ ಜೆಡಿಎಸ್ ಅಭ್ಯರ್ಥಿ ಗೆಲುವಿನೊಂದಿಗೆ ಪಟ್ಟಣ ಪಂಚಾಯತಿಯನ್ನು ತನ್ನ ತೆಕ್ಕೆಗೆ ಪಡೆದು ಜೆಡಿಎಸ್ ಬಾವುಟ ಆರಿಸುವಲ್ಲಿ ಯಶಸ್ವಿಯಾಗಿತ್ತು.
ಜೆಡಿಎಸ್ ಎನ್‌ಡಿಎ ಮಿತ್ರಕೂಟ ಬಿಜೆಪಿ ಜೊತೆ ಸೇರಿ ಮತ್ತೆ ತನ್ನ ತೆಕ್ಕೆಗೆ ಪಡೆದುಕೊಳ್ಳಲು ಜೆಡಿಎಸ್ ಹಾಗೂ ಬಿಜೆಪಿ ಹಲವಾರು ಬಾರಿ ರಹಸ್ಯ ಮಾತುಕತೆ ನಡೆಸಲಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು
ಸತತ ಪ್ರಯತ್ನ ನಡೆಸುತ್ತಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಬಹುತೇಕ ಖಚಿತ:
ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ೭ ಜೆಡಿಎಸ್ ಸದಸ್ಯರು, ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಇದ್ದು, ಒಟ್ಟು ೯ ಜನ ಜೆಡಿಎಸ್ ಪಕ್ಷದ ಕಡೆ ನಿಂತರೆ ಉಳಿಕೆ ೫ ಜನ ಕಾಂಗ್ರೆಸ್ ಸದಸ್ಯರಿದ್ದು, ಪಕ್ಷೇತರ ಅಭ್ಯರ್ಥಿ ನಡೆ ನಿಗೂಢ ವಾಗಿದ್ದು, ಅತಿ ಹೆಚ್ಚು ಸಂಖ್ಯಾಬಲವುಳ್ಳ ಜೆಡಿಎಸ್ ಬಹುತೇಕ ಅಧ್ಯಕ್ಷ ಗದ್ದುಗೆ ಇರುವ ಸಾಧ್ಯತೆ ದಟ್ಟವಾಗಿದೆ ಆದರೆ ಉಪಾಧ್ಯಕ್ಷ ಸ್ಥಾನ ಕೌತುಕಕ್ಕೆ ಕಾರಣವಾಗಿದೆ.
ಜೆಡಿಎಸ್-ಬಿಜೆಪಿ ಹಲವು ಸುತ್ತಿನ ಮಾತುಕತೆ
ಕೊರಟಗೆರೆ ಪಟ್ಟಣ ಪಂಚಾಯತಿಯ ಅಧ್ಯಕ್ಷ ಗದ್ದುಗೆಯನ್ನ ಜೆಡಿಎಸ್ ನಲ್ಲಿಯೇ ಉಳಿಸಿಕೊಳ್ಳಲು ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಹಾಗೂ ಬಿಜೆಪಿ ಸತತವಾಗಿ ಹಲವು ಬಾರಿ ಜೆಡಿಎಸ್ ನ ಮಾಜಿ ಶಾಸಕ ಪಿಆರ್ ಸುಧಾಕರ್ ಲಾಲ್ ಹಾಗೂ ಬಿಜೆಪಿ ಮುಖಂಡ ಬಿ.ಎಚ್ ಅನಿಲ್ ಕುಮಾರ್ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರುಗಳೊಂದಿಗೆ ಹಲವು ಬಾರಿ ರಹಸ್ಯ ಮಾತುಕÀತೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಎನ್‌ಡಿಎ ಮಿತ್ರ ಪಕ್ಷದಲ್ಲೇ ಉಳಿಸಿಕೊಳ್ಳಲು ತಂತ್ರಗಾರಿಕೆ ನಡೆಯುತ್ತಿದೆ ಎನ್ನಲಾದರೂ ಉಪಾಧ್ಯಕ್ಷ ಸ್ಥಾನ ಕೈ ಮೀರುವ ಸಾಧ್ಯತೆ ಕಂಡು ಬರುತ್ತಿದೆ.
ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ :
ಕೊರಟಗೆರೆ ಪಟ್ಟಣ ಪಂಚಾಯಿತಿ ಈ ಹಿಂದೆ ಜೆಡಿಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಪದವಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದು, ಮತ್ತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಎನ್‌ಡಿಎ ಮಿತ್ರ ಪಕ್ಷ ಸತತ ಪ್ರಯತ್ನ ನಡೆಸುತ್ತಿದೆಯಾದ್ರೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಆಶಯದಂತೆ ಚುನಾವಣೆ ನಡೆದದ್ದೇ ಆದರೆ ಇಡೀ ಚಿತ್ರಣ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ, ಅಧ್ಯಕ್ಷ ಸ್ಥಾನ ಜೆಡಿಎಸ್‌ನಲ್ಲಿಯೇ ಒಂದು ವೇಳೆ ಉಳಿದರೆ ಉಪಾಧ್ಯಕ್ಷ ಸ್ಥಾನ ಈಗಾಗಲೇ ಕೈಮೀರಿ ಇಬ್ಬರು ಸದಸ್ಯರುಗಳು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರುಗಳ ಕೈಗೆ ಸಿಗದ ಕಾರಣ ಕಾಂಗ್ರೆಸಿನ ಕೈ ಹಿಡಿತದಲ್ಲಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ತಂತ್ರಗಾರಿಕೆ:
ಪಟ್ಟಣ ಪಂಚಾಯಿತಿ ೧೪ ಸದಸ್ಯ ಬಲದಲ್ಲಿ ಕಾಂಗ್ರೆಸ್‌ನ ಕೇವಲ ೫ ಜನರಿದ್ದರೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚುನಾವಣಾ ಕಣಕ್ಕೆ ಪ್ರವೇಶವಾದರೆ, ಈ ಮೇಲಿನ ಎಲ್ಲಾ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಉಲ್ಟಾ ಸೀದಾ ಆಗಲಿವೆ. ಜೆಡಿಎಸ್‌ನ ಅನಿತಾ ಅವರನ್ನೇ ಕಾಂಗ್ರೆಸ್‌ಗೆ ಕರೆತಂದು ಕಾಂಗ್ರೆಸ್ ನಿಂದ ಅಭ್ಯರ್ಥಿ ಮಾಡುವ ಒಳ ಮಾತುಕತೆ ಸಹ ನಡೆಯುತ್ತಿದೆ, ಇದಕ್ಕೆ ಪರಮೇಶ್ವರ್ ಸಹಮತ ವ್ಯಕ್ತಪಡಿಸಿದರೆ ೭ ಜೆಡಿಎಸ್ ಸದಸ್ಯರಲ್ಲಿ ಒಬ್ಬರು ಒಂದು ವೇಳೆ ಪಕ್ಷೇತರ ಅಭ್ಯರ್ಥಿ ಸಹ ಪರಮೇಶ್ವರ್ ಅವರ ಮಾತಿಗೆ ಸಮ್ಮತಿ ನೀಡಿದರೆ ಸಚಿವರ ಮತ ಸೇರಿ ಕಾಂಗ್ರೆಸ್ ೮ ಅಭ್ಯರ್ಥಿಗಳ ಬಲ ಜೊತೆಗೆ ಒಟ್ಟು ೯ ಆಗಲಿದ್ದು, ಆಗ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡರೂ ಅಚ್ಚರಿ ಇಲ್ಲ.