ಗುವಾಹತಿ: ಅಸ್ಸಾಂನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭೀಕರ ಪ್ರವಾಹದಲ್ಲಿ ದೇಶದ ಪ್ರಮುಖ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರವಾಹದಲ್ಲಿ ಮುಳುಗಡೆಯಾಗಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರವಾಹದಲ್ಲಿ ಕನಿಷ್ಠ 131 ಕಾಡು ಪ್ರಾಣಿಗಳು ಸಾವನ್ನಪ್ಪಿದ್ದು, 96 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸತ್ತ ಪ್ರಾಣಿಗಳಲ್ಲಿ ಆರು ಘೇಂಡಾಮೃಗಗಳು, 117 ಜಿಂಕೆಗಳು ಸೇರಿವೆ.
ಈ ಪೈಕಿ 98 ಪ್ರಾಣಿಗಳು ನೀರಿನಲ್ಲಿ ಮುಳುಗಿಸಾವನ್ನಪ್ಪಿದರೆ, ಎರಡು ಪ್ರಾಣಿಗಳು ವಾಹನದಲ್ಲಿ ಸಾಗಿಸುವಾಗ, ಚಿಕಿತ್ಸೆಯ ಸಮಯದಲ್ಲಿ 17 ಪ್ರಾಣಿಗಳು, ಎರಡು ಕಡವೆ, ಒಂದು ಮಕಾಕ್ ಮತ್ತು ನೀರುನಾಯಿ ಸಾವನ್ನಪ್ಪಿದೆ ಎನ್ನಲಾಗಿದೆ.
ಚಿಕಿತ್ಸೆಯ ಸಮಯದಲ್ಲಿ ಒಟ್ಟು 25 ಪ್ರಾಣಿಗಳು ಸಾವನ್ನಪ್ಪಿವೆ ಮತ್ತು ಇವುಗಳಲ್ಲಿ 17 ಹಂದಿ ಜಿಂಕೆಗಳು, ಜೌಗು ಜಿಂಕೆ, ಮಕಾಕ್ ಮತ್ತು ಓಟರ್ ನಾಯಿ ಸೇರಿವೆ.
ಅರಣ್ಯಾಧಿಕಾರಿಗಳು 85 ಹಂದಿ, ಎರಡು ಖಡ್ಗಮೃಗ, ಕಡವೆ ಮತ್ತು ಗೂಬೆ ಮತ್ತು ಜೌಗು ಜಿಂಕೆ, ಮೊಲ, ಮಕಾಕ್, ಓಟರ್, ಆನೆ ಮತ್ತು ಕಾಡಿನ ಬೆಕ್ಕುಗಳನ್ನು ರಕ್ಷಿಸಿದ್ದಾರೆ. ಅಂತೆಯೇ ಪ್ರಸ್ತುತ, 25 ಪ್ರಾಣಿಗಳು ವೈದ್ಯಕೀಯ ಆರೈಕೆಯಲ್ಲಿದ್ದು, 52 ಪ್ರಾಣಿಗಳನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ