ಕೈವ್: ಉಕ್ರೇನ್‌ನ ಉತ್ತರ ಸುಮಿ ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ರಷ್ಯಾದ ಡ್ರೋನ್ ದಾಳಿ ನಡೆದಿದೆ. ರಷ್ಯಾದ ಡ್ರೋನ್ ಉಕ್ರೇನಿನ ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದಿದ್ದು, ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಸುಮಿ ಪ್ರದೇಶದ ಶೋಸ್ಟ್ಕಾದಲ್ಲಿರುವ ರೈಲ್ವೆ ನಿಲ್ದಾಣದ ಮೇಲೆ ಕ್ರೂರ ರಷ್ಯಾದ ಡ್ರೋನ್ ದಾಳಿ” ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾರೆ. ಧ್ವಂಸಗೊಂಡ ರೈಲು, ಸುಟ್ಟುಹೋದ ಪ್ರಯಾಣಿಕರ ಬೋಗಿ ಮತ್ತು ಕಿಟಕಿಗಳು ಆ ದಾಳಿಯ ಭಯಾನಕತೆಯನ್ನು ತೆರೆದಿಡುತ್ತಿವೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿದೆ. ಇದರಲ್ಲಿ ಡಜನ್ಗಟ್ಟಲೆ ಪ್ರಯಾಣಿಕರು ಮತ್ತು ರೈಲು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಶೋಸ್ಟ್ಕಾದಿಂದ ಉಕ್ರೇನ್ ರಾಜಧಾನಿ ಕೈವ್‌ಗೆ ಹೋಗುತ್ತಿದ್ದ ರೈಲಿಗೆ ಡ್ರೋನ್ ಡಿಕ್ಕಿ ಹೊಡೆದಿದೆ ಎಂದು ಪ್ರಾದೇಶಿಕ ಗವರ್ನರ್ ಒಲೆಹ್ ಹ್ರಿಹೊರೊವ್ ಹೇಳಿದ್ದಾರೆ. ವೈದ್ಯರು ಮತ್ತು ರಕ್ಷಣಾ ಪಡೆಗಳು ರೈಲಿನ ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ದಾಳಿಯಿಂದ ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಜಿಲ್ಲಾ ಆಡಳಿತದ ಮುಖ್ಯಸ್ಥ ಒಕ್ಸಾನಾ ತರಾಸಿಯುಕ್ ತಿಳಿಸಿದ್ದಾರೆ. ಸಾವಿನ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ರಷ್ಯಾ ಉಕ್ರೇನ್‌ನ ರೈಲ್ವೆ ಮೂಲಸೌಕರ್ಯದ ಮೇಲೆ ತನ್ನ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ. ಕಳೆದ ಎರಡು ತಿಂಗಳುಗಳಲ್ಲಿ ಬಹುತೇಕ ಪ್ರತಿದಿನ ಉಕ್ರೇನ್ ಮೇಲೆ ದಾಳಿ ಮಾಡುತ್ತಿದೆ.
For More Updates Join our WhatsApp Group :
