‘ಉಸ್ತಾದ್ ಭಗತ್ ಸಿಂಗ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಸಂಭಾಷಣೆ ವೈರಲ್
ಪವನ್ ಕಲ್ಯಾಣ್ ತೆಲುಗು ರಾಜ್ಯಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಆಂಧ್ರ ಡಿಸಿಎಂ ಆಗಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪವನ್ ಕಲ್ಯಾಣ್ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಸಹ ನಟಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ಇನ್ನೂ ಹಲವರು ಭಾಗಿ ಆಗಿದ್ದರು. ಈ ವೇಳೆ ಪವನ್ ಕಲ್ಯಾಣ್ ಮಾತನಾಡಿ ತಮಗೆ ಶ್ರೀಲೀಲಾ ಜೊತೆ ನನ್ನನ್ನು ಒಂದೇ ಫ್ರೇಮ್ನಲ್ಲಿ ತೋರಿಸಬೇಡಿ ಎಂದು ನಿರ್ದೇಶಕರ ಬಳಿ ಹೇಳಿಬಿಟ್ಟಿದ್ದೆ ಎಂದರು. ಅದಕ್ಕೆ ಕಾರಣವೇನು?
ಕಾರ್ಯಕ್ರಮ ಆರಂಭಕ್ಕೂ ಮುನ್ನ, ನಿರೂಪಕಿ ಸುಮಾ ಕನಕಾಲ ಅವರು ಪವನ್ ಅವರೊಟ್ಟಿಗೆ ಮಾತನಾಡುತ್ತಾ, ನೀವು ಸಖತ್ ಆಗಿ ಡ್ಯಾನ್ಸ್ ಮಾಡಿದ್ದೀರಿ, ಶ್ರೀಲೀಲಾ ಡ್ಯಾನ್ಸ್ ಸಹ ಟ್ರೈಲರ್ನಲ್ಲಿ ಅಲ್ಲಲ್ಲಿ ಕಾಣಿಸಿದೆ ಎಂದರು. ಅದಕ್ಕೆ ಪವನ್ ಕಲ್ಯಾಣ್, ‘ನಾನು ನಿರ್ದೇಶಕರ ಬಳಿ ಕಡ್ಡಾಯವಾಗಿ ಹೇಳಿಬಿಟ್ಟಿದ್ದೆ, ನನ್ನನ್ನು ಶ್ರೀಲೀಲಾ ಜೊತೆಗೆ ಡ್ಯಾನ್ಸ್ ಮಾಡಿಸಬೇಡಿ, ನಾನು ಒಬ್ಬನೇ ಡ್ಯಾನ್ಸ್ ಮಾಡಬೇಕು ಅಥವಾ ಶ್ರೀಲೀಲಾ ಒಬ್ಬರೇ ಡ್ಯಾನ್ಸ್ ಮಾಡಬೇಕು, ಹಾಡುಗಳಲ್ಲಿ ನನ್ನ ಶ್ರೀಲೀಲಾ ಜೊತೆ ತೋರಿಸಲೇಬೇಡಿ. ಏಕೆಂದರೆ ಶ್ರೀಲೀಲಾ ಅದ್ಭುತವಾದ ಡ್ಯಾನ್ಸರ್, ಡ್ಯಾನ್ಸ್ನಲ್ಲಿ ಅವರು ನನ್ನನ್ನು ಸುಲಭವಾಗಿ ಡಾಮಿನೇಟ್ ಮಾಡಿಬಿಡುತ್ತಾರೆ’ ಎಂದರು ಪವನ್ ಕಲ್ಯಾಣ್.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾನಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
For More Updates Join our WhatsApp Group :



