ಪವನ್ ಕಲ್ಯಾಣ್ ಹೊಸ ಸಿನಿಮಾ: ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 23 ರಂದು ತೆರೆಗೆ.

ಪವನ್ ಕಲ್ಯಾಣ್ ಹೊಸ ಸಿನಿಮಾ: ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 23 ರಂದು ತೆರೆಗೆ.

ಟಾಲಿವುಡ್ ಸ್ಟಾರ್ ಡಿಸಿಎಂ ಆದ ನಂತರ ಬ್ಯುಸಿ ರಾಜಕೀಯ ಮಧ್ಯೆ ಸಿನಿಮಾಗೆ ಮರಳಿ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್  ಟಾಲಿವುಡ್​ನ ಸ್ಟಾರ್ ನಟರೂ ಸಹ ಹೌದು. ಪವನ್ ಕಲ್ಯಾಣ್ ಸಕ್ರಿಯ ರಾಜಕೀಯಕ್ಕೆ ಇಳಿದ ಬಳಿಕ ಅವರು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಪವನ್ ಅವರು ಆಂಧ್ರ ಡಿಸಿಎಂ ಆದ ಬಳಿಕ ಅವರ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಇದೀಗ ಮತ್ತೊಂದು ಸಿನಿಮಾ ಬಿಡುಗಡೆ ಆಗಲಿದ್ದು, ಇಂದಷ್ಟೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಅದರ ಬಳಿಕ ‘ಓಜಿ’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. ಇದೀಗ ಪವನ್ ಅವರ ಮತ್ತೊಂದು ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ತೆರೆಗೆ ಬರುತ್ತಿದೆ. ಈ ಸಿನಿಮಾ ಪವನ್ ಅಭಿಮಾನಿಗಳಿಗಾಗಿಯೇ ಮಾಡಲಾದ ಸಿನಿಮಾ ಆಗಿದೆ ಎಂಬುದು ನಿರ್ದೇಶಕ ಹರೀಶ್ ಶಂಕರ್ ಮಾತು.

ಪವನ್ ಕಲ್ಯಾಣ್ ಜೊತೆಗೆ ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ಸಹ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 23 ರಂದು ಬಿಡುಗಡೆ ಆಗಲಿದೆ. ಕನ್ನಡದ ‘ಟಾಕ್ಸಿಕ್’, ಹಿಂದಿಯ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆದ ನಾಲ್ಕು ದಿನಗಳ ಬಳಿಕ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *