‘Peddi’ ಹೊಸ ಪೋಸ್ಟರ್ ಔಟ್: ರಿಲೀಸ್ ಡೇಟ್ ಕಾಣದೆ ಫ್ಯಾನ್ಸ್ ಗೊಂದಲ.

‘Peddi’ ಹೊಸ ಪೋಸ್ಟರ್ ಔಟ್: ರಿಲೀಸ್ ಡೇಟ್ ಕಾಣದೆ ಫ್ಯಾನ್ಸ್ ಗೊಂದಲ.

ರಾಮ್ ಚರಣ್ ಮಾಸ್ ಲುಕ್ ವೈರಲ್; ಸಿನಿಮಾ ಮುಂದೂಡಿಕೆ ಆತಂಕ ಹೆಚ್ಚಳ.

ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗ ದೊಡ್ಡ ಚರ್ಚೆ ನಡೆಯುತ್ತಿದೆ. ಚಿತ್ರದ ಬಿಡುಗಡೆ ವಿಳಂಬವಾಗಲಿದೆ ಎಂಬ ಗಾಳಿಸುದ್ದಿಗಳು ಹಬ್ಬಿವೆ. ಇವುಗಳ ನಡುವೆ ಚಿತ್ರತಂಡ ಹನುಮ ಜಯಂತಿಯ ಅಂಗವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್​ನಲ್ಲಿ ರಾಮ್ ಚರಣ್ ಅವರ ಲುಕ್ ಗಮನ ಸೆಳೆದಿದೆ. ಆದರೆ ರಿಲೀಸ್ ಡೇಟ್ ಬಗ್ಗೆ ಪ್ರಸ್ತಾಪ ಇಲ್ಲ! ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣ ಆಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಪೆದ್ದಿ ಪೈಲ್ವಾನ್’ ಗ್ಲಿಂಪ್ಸ್‌ನಿಂದ ಸಿದ್ಧಪಡಿಸಲಾದ ಈ ಪೋಸ್ಟರ್‌ನಲ್ಲಿ ರಾಮ್ ಚರಣ್ ಅತ್ಯಂತ ಪವರ್​ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಲಿಷ್ಠ ಮೈಕಟ್ಟು ಮತ್ತು ಗಂಭೀರ ನೋಟವು ಹನುಮಂತನ ಶೌರ್ಯವನ್ನು ನೆನಪಿಸುವಂತಿದೆ. ಈ ಲುಕ್ ಕಂಡ ಅಭಿಮಾನಿಗಳು ‘ಇದು ಪಕ್ಕಾ ಮಾಸ್ ಸಿನಿಮಾ’ ಎಂದು ಜೈಕಾರ ಹಾಕುತ್ತಿದ್ದಾರೆ.

 ‘ವೃದ್ಧಿ ಸಿನಿಮಾಸ್’ ಸಂಸ್ಥೆಯು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಿಲೀಸ್ ಡೇಟ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *