ಕಪ್ಪು ಕಲೆಗಳಿರುವ ಈರುಳ್ಳಿಯನ್ನು ಈ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಿನ್ನಲೇಬಾರದು.

ಕಪ್ಪು ಕಲೆಗಳಿರುವ ಈರುಳ್ಳಿಯನ್ನು ಈ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಿನ್ನಲೇಬಾರದು.

ನಮ್ಮ ಹಿರಿಯರು ಈರುಳ್ಳಿಯಲ್ಲಿ ಸಾಕಷ್ಟು ಪ್ರಯೋಜನಗಳಿವೆ ಎಂದು ಹೇಳುತ್ತಾರೆ. ಏಕೆಂದರೆ ಇದೊಂದು ಪೋಷಕಾಂಶಗಳ ಗಣಿಯಾಗಿದೆ. ಆದರೆ ಕೆಲವೊಮ್ಮೆ ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಂಡು ಬರುವುದನ್ನು ನೀವು ಗಮನಿಸಿರಬಹುದು. ಕೆಲವರಿಗೆ ಈ ರೀತಿಯಾದ ಈರುಳ್ಳಿಯನ್ನು ತಿನ್ನಬಹುದೇ ಇದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ ಎಂಬ ಅನುಮಾನ ಉಂಟಾಗುತ್ತದೆ. ಹಾಗಾದರೆ ಇದರ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು? ಇದರಿಂದ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈರುಳ್ಳಿ ತಿನ್ನದವರೇ ಇಲ್ಲ. ಅಡಿಗೆಯ ರುಚಿಯನ್ನೇ ಬದಲಾಯಿಸುವ ಶಕ್ತಿ ಇದಕ್ಕಿದೆ. ಅದಕ್ಕಾಗಿಯೇ ನಮ್ಮ ಹಿರಿಯರು ಈರುಳ್ಳಿಯಿಂದ ಸಿಗುವ ಪ್ರಯೋಜನಗಳನ್ನು ಅಮೃತಕ್ಕೆ ಹೋಲಿಸುತ್ತಿದ್ದರು. ಈರುಳ್ಳಿ ಮಾತ್ರವಲ್ಲ ಅದರ ಸಿಪ್ಪೆಯಿಂದಲೂ ಅನೇಕ ರೀತಿಯ ಆರೋಗ್ಯಕರ ಗುಣಗಳು ಮತ್ತು ಪೋಷಕಾಂಶಗಳು ಸಮೃದ್ಧವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈರುಳ್ಳಿ ಆಹಾರಕ್ಕೆ ಉತ್ತಮ ರುಚಿ ನೀಡುವುದಲ್ಲದೆ, ದೇಹವನ್ನು ಆರೋಗ್ಯವಾಗಿಡುತ್ತದೆ. ಆದರೆ ಕೆಲವೊಮ್ಮೆ ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಂಡು ಬರುವುದನ್ನು ನೀವು ಗಮನಿಸಿರಬಹುದು. ಕೆಲವರಿಗೆ ಈ ರೀತಿಯಾದ ಈರುಳ್ಳಿಯನ್ನು ತಿನ್ನಬಹುದೇ ಇದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ ಎಂಬ ಅನುಮಾನ ಉಂಟಾಗುತ್ತದೆ. ಹಾಗಾದರೆ ಇದರ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು? ಇದರಿಂದ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈರುಳ್ಳಿ ಮೇಲೆ ಕಪ್ಪು ಪದರ ಯಾಕೆ ಉಂಟಾಗುತ್ತೆ?

ಈರುಳ್ಳಿಯ ಮೇಲೆ ಕಪ್ಪು ಕಲೆಗಳಿದ್ದರೆ, ಅದು ಆಸ್ಪರ್ಜಿಲಸ್ ನೈಗರ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಗಾಳಿಯ ಸರಿಯಾಗಿ ಬರದಂತಹ ಸ್ಥಳಗಳಲ್ಲಿ, ವಿಶೇಷವಾಗಿ ಆರ್ದ್ರ ಸ್ಥಿತಿಯಲ್ಲಿ ಈರುಳ್ಳಿಯನ್ನು ಚೀಲಗಳಲ್ಲಿ ಅಥವಾ ಮುಚ್ಚಿದ ಪಾತ್ರೆಗಳಲ್ಲಿ ಸಂಗ್ರಹಿಸಿದಾಗ ಈರುಳ್ಳಿಯ ಹೊರ ಪದರದ ಮೇಲೆ ಶಿಲೀಂಧ್ರ ಬೆಳೆಯಲು ಪ್ರಾರಂಭಿಸುತ್ತದೆ. ಈರುಳ್ಳಿಯ ಹೊರ ಚರ್ಮವು ಹಾನಿಗೊಳಗಾಗಿದ್ದರೆ, ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಯಾರಿಗೆ ಒಳ್ಳೆಯದಲ್ಲ?

ಪೌಷ್ಟಿಕ ತಜ್ಞರು ಈ ಶಿಲೀಂಧ್ರದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಈರುಳ್ಳಿಯ ಮೇಲೆ ಕಂಡು ಬರುವ ಈ ಕಪ್ಪು ಚುಕ್ಕೆಗಳು ಯಾವುದೇ ರೀತಿಯಲ್ಲಿಯೂ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಈ ರೀತಿಯಾಗಿದ್ದರೆ ಅಂತಹ ಈರುಳ್ಳಿಗಳ ಹೊರ ಪದರವನ್ನು ಸರಿಯಾಗಿ ಸ್ವಚ್ಛಗೊಳಿಸಿ ನಂತರ ಅಡುಗೆಗೆ ಬಳಸಬಹುದು. ಆದರೆ ಈ ರೀತಿ ಈರುಳ್ಳಿಯನ್ನು ಬೇಯಿಸುವ ಮೊದಲು, ಸಿಪ್ಪೆ ಸುಲಿದು ಚೆನ್ನಾಗಿ ತೊಳೆಯಬೇಕು ಎಂಬುದನ್ನು ಮರೆಯಬಾರದು. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಅಧ್ಯಯನಗಳು ಕೂಡ ಹೇಳುತ್ತವೆ. ಆದರೆ ಈ ಕಪ್ಪು ಶಿಲೀಂಧ್ರವು ಕೆಲವು ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡುವ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ ಅಲರ್ಜಿ, ಆಸ್ತಮಾ ಮತ್ತು ಉಸಿರಾಟದ ಕಾಯಿಲೆ ಇರುವವರು ಈ ರೀತಿಯಾದ ಈರುಳ್ಳಿಯನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ. ಇದಲ್ಲದೆ, ಕೆಲವರು ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ಸರಿಯಲ್ಲ. ಅದಲ್ಲದೆ ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಅವುಗಳ ಮೇಲೆ ಕಪ್ಪು ಶಿಲೀಂಧ್ರ ಇರಬಾರದು ಎಂದು ತಜ್ಞರು ಹೇಳುತ್ತಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *