ಇತ್ತೀಚಿನ ದಿನಗಳಲ್ಲಿ ರೈತರಲ್ಲಿ ಕ್ಯಾನ್ಸರ್ ಅಪಾಯ ಗಮನಾರ್ಹವಾಗಿ ಹೆಚ್ಚುತ್ತಿದ್ದು, ಇದು ಆತಂಕಕಾರಿಯಾಗಿದೆ. ಇದಕ್ಕೆ ಕಾರಣ ಕೀಟನಾಶಕಗಳಾಗಿದೆ. ಕೀಟನಾಶಕಗಳಲ್ಲಿನ ರಾಸಾಯನಿಕತೆಗೆ ಒಡ್ಡಿಕೊಳ್ಳುತ್ತಿರುವ ರೈತರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚುತ್ತಿದ್ದು, ಧೂಮಪಾನದಲ್ಲಿರುವಂತ ರಾಸಾಯನಿಕ ಅಂಶಗಳೇ ಈ ಕೀಟನಾಶಕದಲ್ಲಿ ಕಂಡು ಬರುತ್ತಿದೆ ಎಂದಿದ್ದಾರೆ.
ಇದಕ್ಕಾಗಿ ಇತ್ತೀಚಿಗೆ ಅಮೆರಿಕದ ಸಂಶೋಧಕರು 69 ಬಗೆಯ ಕೀಟನಾಶಕಗಳು ಬೀರುವ ಪರಿಣಾಮಗಳನ್ನು ಹತ್ತಿರದಿಂದ ಗಮನಿಸಿದ್ದಾರೆ . 2-4 ಡಿ, ಅಸೆಫೆಟ್, ಮೆಟೊಲಕ್ಲೊರ್ ಮತ್ತು ಮಿಥೊಮೈಲ್ ಅನ್ನು ಭಾರತದಲ್ಲಿ ವ್ಯಾಪಾಕವಾಗಿ ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ ಕೀಟ ಮತ್ತು ಕಳೆಗಳನ್ನು ಕಡಿಮೆ ಮಾಡಲು ಬಳಕೆ ಮಾಡುವ ಈ ಕೀಟ ನಾಶಕಗಳು ಕೂಡ ಈ ಪರೀಕ್ಷೆಗೆ ಒಳಪಟ್ಟಿದೆ. ಇಂತಹ ಕೀಟನಾಶಕಗಳನ್ನು ತಮ್ಮ ಜಮೀನಿನಲ್ಲಿ ಸಿಂಪಡಿಸುವಾಗ ಸಾಮಾನ್ಯವಾಗಿ ರೈತರು ಇದಕ್ಕೆ ಹೆಚ್ಚಿನ ಮಟ್ಟದಲ್ಲಿ ತೆರೆದುಕೊಳ್ಳುತ್ತಾರೆ.
ಕೀಟನಾಶಕಗಳ ಅಡ್ಡ ಪರಿಣಾಮಗಳ ಕುರಿತು ಈ ಸಂಶೋಧನೆ ನಡೆಸಲಾಗಿದೆ. ಇದರ ಭಾಗವಾಗಿ 2015 ಮತ್ತು 2019ರ ನಡುವೆ ಅಮೆರಿಕದಲ್ಲಿ ಕ್ಯಾನ್ಸರ್ ಸಂತ್ರಸ್ತರ ಮಾಹಿತಿಯನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಎಚ್) ಮತ್ತು ರೋಗ ಮತ್ತು ನಿಯಂತ್ರಣ ಮಂಡಳಿ (ಸಿಡಿಸಿ)ಗಳಿಂದ ಪಡೆದು ಪರೀಕ್ಷೆ ನಡೆಸಲಾಗಿದೆ
ಈ ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳೆಂದರೆ, ಈ ಕೀಟನಾಶಕಗಳಿಗೆ ತೆರೆದುಕೊಂಡ ಮೂರು ಬಗೆಯ ಕ್ಯಾನ್ಸರ್ ಅಪಾಯ ಇದೆ. ಪ್ರಮುಖವಾಗಿ ನಾನ್- ಹಾಡ್ಗ್ಕಿನ್ಸ್ ಲಿಂಫೋಮಾ, ಲ್ಯುಕೇಮಿಯಾ ಮತ್ತು ಮೂತ್ರಕೋಶದ ಕ್ಯಾನ್ಸರ್, ಕೀಟನಾಶಕ ಸಿಂಪಡಣೆಯ ಪರಿಣಾಮದಿಂದಾಗಿ ಹೆಚ್ಚುತ್ತಿದೆ. ಬಹುತೇಕ ಪ್ರಕರಣದಲ್ಲಿ ಹಲವು ಬಗೆಯ ಕೀಟನಾಶಕಗಳನ್ನು ಒಟ್ಟಿಗೆ ಬಳಕೆ ಮಾಡುತ್ತಾರೆ. ಈ ಹಿನ್ನಲೆ ಯಾವ ರಾಸಾಯನಿಕಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದಿಲ್ಲ.
ಆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಅನುಸಾರವಾಗಿ ಕ್ಯಾನ್ಸರ್ಗಳು ಸಂಭವಿತ ಬದಲಾವಣೆ ಕಾಣುತ್ತದೆ. ಆದಾಗ್ಯೂ, ವಿಶಾಲ ಅರ್ಥ ದಲ್ಲಿ ಗಮನಿಸಿದಾಗ ಇತರೆ ಪ್ರಾದೇಶಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ.