ಪೆಟ್ರೋಲ್ & ಡೀಸೆಲ್ ವಿಚಾರದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡೊನಾಲ್ಡ್ ಟ್ರಂಪ್

ಪೆಟ್ರೋಲ್ & ಡೀಸೆಲ್ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಆಗುತ್ತಿದ್ದಂತೆ, ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಡೊನಾಲ್ಡ್ ಟ್ರಂಪ್ ಹೇಳಿರುವ ಅದೊಂದು ಮಾತು ಇದೀಗ ಜಾಗತಿಕ ಮಟ್ಟದಲ್ಲಿ ಹಲ್ಚಲ್ ಎಬ್ಬಿಸಿದೆ.

ಹಾಗಾದ್ರೆ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಟ್ರಂಪ್ ಹೇಳಿದ್ದು ಏನು?

ಪೆಟ್ರೋಲ್ & ಡೀಸೆಲ್ ಜಗತ್ತಿನ ಪ್ರತಿಯೊಂದು ದೇಶಕ್ಕೂ ಬೇಕಾಗಿರುವ ವಸ್ತು. ಹೀಗಾಗಿಯೇ ಕಚ್ಚಾತೈಲ ಅಂದ್ರೆ ಪೆಟ್ರೋಲ್ & ಡೀಸೆಲ್ ತಯಾರಿಸುವ ಮೂಲ ವಸ್ತುವಿಗೆ ಭಾರಿ ಡಿಮ್ಯಾಂಡ್ ಇದೆ. ಜಗತ್ತಿನಲ್ಲಿ ಅತಿಹೆಚ್ಚು ತೈಲ ಸಂಪತ್ತು ಹೊಂದಿರುವ ದೇಶಗಳ ಪೈಕಿ ಸೌದಿ ಅರೇಬಿಯಾ ಮತ್ತು ರಷ್ಯಾ ಮುಂಚೂಣಿಯಲ್ಲಿ ಇವೆ. ಹೀಗಿದ್ದಾಗಲೇ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಬಳಿ ಇರುವ ಕಚ್ಚಾತೈಲ ಅಂದ್ರೆ ಪೆಟ್ರೋಲ್ & ಡೀಸೆಲ್ ಪ್ರಮಾಣದ ಬಗ್ಗೆ ಈಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಪೆಟ್ರೋಲ್ & ಡೀಸೆಲ್ ಯುದ್ಧ ಶುರು?

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಮತದಾನ ಇದೇ ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ನಡೆಯಲಿದೆ. ಹೀಗಾಗಿ ಭರ್ಜರಿ ಪ್ರಚಾರ ನಡೆಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವ ನಿರೀಕ್ಷೆ ಕೂಡ ಹೊಂದಿದ್ದಾರೆ. ಇದೇ ಸಮಯದಲ್ಲಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ವೇಳೆ ಸ್ಫೋಟಕ ವಿಚಾರ ಒಂದನ್ನ ಬಿಚ್ಚಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್. ಅದು ಏನೆಂದರೆ ಜಗತ್ತಿನ ಯಾವುದೇ ದೇಶದ ಬಳಿ ಇರದಷ್ಟು ತೈಲ ಸಂಪತ್ತು ಅಮೆರಿಕದ ಬಳಿ ಇದೆ. ನಾನು ಈ ಬಾರಿ ಅಧ್ಯಕ್ಷನಾಗಿ ಅಧಿಕಾರಕ್ಕೆ ಬಂದರೆ, ಅಮೆರಿಕದಲ್ಲಿ ಇರುವ ಪೆಟ್ರೋಲ್ & ಡೀಸೆಲ್ ಸಂಪತ್ತನ್ನು ಬಳಸಿ ಅಮೆರಿಕವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವೆ ಎಂದಿದ್ದಾರೆ.

ಟ್ರಂಪ್ ಬೆಂಬಲಿಗರಿಗೆ ಹೊಸ ಅಸ್ತ್ರ!

ಡೊನಾಲ್ಡ್ ಟ್ರಂಪ್ ಇದೇ ವೇಳೆ ಬೇರೆ ಬೇರೆ ದೇಶಗಳ ಜೊತೆಗಿನ ತೈಲ ವ್ಯವಹಾರ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ ಅಮೆರಿಕದ ಬಳಿ ಇರುವ ತೈಲ ಸಂಪತ್ತನ್ನು ಮಾರಾಟ ಮಾಡಿದರೆ, ನಾವು ನಮ್ಮ ಸಾಲ ಕೂಡ ತೀರಿಸಬಹುದು ಎಂಬುದು ಡೊನಾಲ್ಡ್ ಟ್ರಂಪ್ ಅವರ ವಾದ. ಹೀಗಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಭಾರಿ ದೊಡ್ಡ ಹಲ್ಚಲ್ ಎದ್ದಿದೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರಿಗೆ ಈ ಮೂಲಕ ಹೊಸ ಅಸ್ತ್ರ ಕೂಡ ಸಿಕ್ಕಂತಾಗಿದೆ.

Leave a Reply

Your email address will not be published. Required fields are marked *