ಭಾರತದಲ್ಲಿ ನಯಾರಾ Petrol ದರ ಹೆಚ್ಚಳ.

 ಭಾರತದಲ್ಲಿ ನಯಾರಾ Petrol ದರ ಹೆಚ್ಚಳ.

ಲೀಟರ್ಗೆ ₹5ರವರೆಗೆ ಹೆಚ್ಚಳ, ಖಾಸಗಿ ಕಂಪನಿಯ ನಿರ್ಧಾರ.

ನವದೆಹಲಿ: ಇರಾನ್ ಯುದ್ಧ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಆದರೂ ಭಾರತದಲ್ಲಿ ಸರ್ಕಾರದ ಸೂಚನೆ ಮೇರೆಗೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಏರಿಸಲಾಗಿಲ್ಲ. ಇದೀಗ ಖಾಸಗಿ ಇಂಧನ ರೀಟೇಲ್ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 5.30 ರೂ ಏರಿದರೆ, ಡೀಸಲ್ ಬೆಲೆ 3 ರೂ ಹೆಚ್ಚಿದೆ.

ಭಾರತದಲ್ಲಿ 2022ರಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ ಆಗಿದ್ದು ಇದೇ ಮೊದಲು. 2022ರ ಮೇ ತಿಂಗಳಲ್ಲಿ ಪೆಟ್ರೋಲ್ ದರ ಪರಿಷ್ಕರಣೆ ಆಗಿತ್ತು. ಮತ್ತೊಂದು ಖಾಸಗಿ ರೀಟೇಲರ್ ಆಗಿರುವ ಜಿಯೋ ಬಿಪಿ ಇನ್ನೂ ಕೂಡ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡಿಲ್ಲ. ಪೆಟ್ರೋಲ್ ರೀಟೇಲ್ ಕ್ಷೇತ್ರದಲ್ಲಿ ಶೇ. 90ರಷ್ಟು ಪಾರಮ್ಯ ಹೊಂದಿರುವ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಎಚ್​ಪಿ ಮತ್ತು ಬಿಪಿ ತಮ್ಮ ಸಾಮಾನ್ಯ ಪೆಟ್ರೋಲ್, ಡೀಸಲ್ ದರಗಳನ್ನು ಏರಿಸಿಲ್ಲ.

ಕೆಲ ದಿನಗಳ ಹಿಂದೆ ಈ ಒಎಂಸಿಗಳು ತಮ್ಮ ಪ್ರೀಮಿಯಮ್ ಪೆಟ್ರೋಲ್ ಬೆಲೆಗಳನ್ನು ಏರಿಸಿದ್ದವು. ಪ್ರೀಮಿಯಮ್ 95-ಆಕ್ಟೇನ್ ಪೆಟ್ರೋಲ್ ಬೆಲೆಯಲ್ಲಿ ಲೀಟರ್​ಗೆ 2 ರೂನಷ್ಟು ಏರಿಕೆ ಮಾಡಲಾಯಿತು. ಇಂಡಸ್ಟ್ರಿಯಲ್ ಡೀಸಲ್ ಬೆಲೆಯಲ್ಲೂ ಏರಿಕೆ ಮಾಡಲಾಗಿತ್ತು. ಆದರೆ, ಮಾಮೂಲಿಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಹೆಚ್ಚಳ ಮಾಡಲಾಗಿಲ್ಲ. ನಯಾರಾ ಪೆಟ್ರೋಲ್ ಪಂಪ್​ಗಳಲ್ಲಿ ಮಾತ್ರವೇ ಬೆಲೆ ಏರಿಕೆ ಆಗಿದೆ.

ಭಾರತದಲ್ಲಿ 1,02,075 ಪೆಟ್ರೋಲ್ ಪಂಪ್​ಗಳಿವೆ. ಈ ಪೈಕಿ ನಯಾರಾ ಎನರ್ಜಿಯ ಪಂಪ್​ಗಳ ಸಂಖ್ಯೆ 6,967. ಜಿಯೊ ಬಿಪ್ ಔಟ್​ಲೆಟ್​ಗಳ ಸಂಖ್ಯೆ 2,185. ಇನ್ನುಳಿದ 90,000ಕ್ಕೂ ಅಧಿಕ ಪೆಟ್ರೋಲ್ ಪಂಪ್​ಗಳು ಇಂಡಿಯನ್ ಆಯಿಲ್, ಬಿಪಿ ಮತ್ತು ಎಚ್​ಪಿಗೆ ಸೇರಿದ್ದಾಗಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *