ಬೆಂಗಳೂರು: ಸಂದಡಿಯಲ್ಲಿ ಸಂತೋಷ ಸಡಗರವಿರಬೇಕಾದ ದಿನ, ಕನ್ನಡದ ಜನಪ್ರಿಯ ನಟ ದಿವಂಗತ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನ ಸ್ಟುಡಿಯೋ ಬಳಿ ವರ್ಷಗಳ ನಿರೀಕ್ಷೆಯಲ್ಲಿರುವ ಈ ಅಭಿಮಾನಿಗಳ ಬೇಡಿಕೆ ಇಂದಿಗೂ ನಿರೀಕ್ಷೆಯಲ್ಲೇ ಉಳಿದಿದೆ.
ಅಭಿಮಾನಿಗಳ ಮನವಿ: “ಕೇವಲ 10 ಗುಂಟೆ ಜಾಗ ಕೊಡಿ”
ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ ಸ್ಥಳ, ಬೆಂಗಳೂರು ಹೊರವಲಯದ ಅಭಿಮಾನ ಸ್ಟುಡಿಯೋಯಲ್ಲಿ ಇಂದು ಸಂಭ್ರಮಾಚರಣೆ ಇಲ್ಲ. ಈ ಕುರಿತು ಮಾತನಾಡಿದ ಅವರ ಕೆಲವು ಭಕ್ತ ಅಭಿಮಾನಿಗಳು,
“ನಾವು ಪ್ರಶಸ್ತಿಗೆ ಇಲ್ಲ. ವಿಷ್ಣು ಸಾರ್ ಒಬ್ಬ ನಾಯಕ. ಅವರು ಪ್ರಶಸ್ತಿಗೆ ಹಾದಿಯಿಲ್ಲ. ಸರ್ಕಾರಕ್ಕೆ ವಿನಂತಿ – ನಮಗೆ ಕೇವಲ 10 ಗುಂಟೆ ಜಾಗ ಕೊಡಿ. ನಮ್ಮ ದೇವರ ಪೂಜೆಗೆ ಆ ಜಾಗ ಸಾಕು.“
ಪ್ರತ್ಯೇಕ ಜಾಗದಲ್ಲಿ ಬರ್ತ್ಡೇ ಆಚರಣೆ
ಈ ವರ್ಷ ಕೂಡ ವಿಷ್ಣು ಹುಟ್ಟುಹಬ್ಬದ ಕಾರ್ಯಕ್ರಮವನ್ನು ಪ್ರತ್ಯೇಕ ಸ್ಥಳದಲ್ಲಿ ಅಭಿಮಾನಿಗಳು ನಡೆಸಿದ್ದಾರೆ. ಆದರೆ ಅವರ ಅಂತ್ಯಸಂಸ್ಕಾರ ಜಾಗದಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮ ನಡೆಯದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಅಭಿಮಾನಿಗಳ ಶಬ್ದ ಪ್ರಾಧಿಕಾರದ ಕಿವಿಗೆ ಬೀಳಲಿ!
“ಅಭಿಮಾನ ಸ್ಟುಡಿಯೋ ಒಂದು ಸ್ಮಾರಕ ಆಗಬೇಕು” ಎಂಬುದು ವಿಷ್ಣು ಅಭಿಮಾನಿಗಳ ಬಹುಕಾಲದ ಡ್ರೀಮ್. ಆದರೆ ಈವರೆಗೂ ಸರ್ಕಾರದ ವತಿಯಿಂದ ಸ್ಪಷ್ಟ ನಿರ್ಧಾರವಿಲ್ಲ ಎಂಬ ವಿಷಾದವಿದೆ.
For More Updates Join our WhatsApp Group :
