ಪ್ರಧಾನಿ ಮೋದಿ ಎರಡು ದಿನಗಳ ಜಮ್ಮು-ಕಾಶ್ಮೀರ ಭೇಟಿ : ಹೈ-ಅಲರ್ಟ್ ಭದ್ರತಾ ವ್ಯವಸ್ಥೆ

ನವದೆಹಲಿ || ಉಕ್ಕು ಆಮದು ಮೇಲೆ ಶೇ.12ರಷ್ಟು ಸುರಕ್ಷತಾ ಸುಂಕ ವಿಧಿಸಿದ ಕೇಂದ್ರ ಸರ್ಕಾರ

ಶ್ರೀನಗರ: ಇಂದು ಗುರುವಾರದಿಂದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ

ಪ್ರಧಾನಿಯವರಿಗೆ ಬಹು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಬಹು ಹಂತದ ಭದ್ರತೆಯಾಗಿದೆ. ಭದ್ರತಾ ಶಿಷ್ಟಾಚಾರಗಳ ಪ್ರಕಾರ, ಇಲ್ಲಿ ಹೈ-ಅಲರ್ಟ್ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಬಿರ್ಡಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ

ಶ್ರೀನಗರ ಪೊಲೀಸರು ಡ್ರೋನ್‌ಗಳು ಮತ್ತು ಕ್ವಾಡ್‌ಕಾಪ್ಟರ್‌ಗಳ ಕಾರ್ಯಾಚರಣೆಗಾಗಿ ನಗರವನ್ನು ‘ತಾತ್ಕಾಲಿಕ ರೆಡ್ ಝೋನ್ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ. ರೆಡ್ ಝೋನ್‌ನಲ್ಲಿನ ಎಲ್ಲಾ ಅನಧಿಕೃತ ಡ್ರೋನ್ ಕಾರ್ಯಾಚರಣೆಗಳು ಡ್ರೋನ್ ನಿಯಮಗಳು, 2021 ರ ಸಂಬಂಧಿತ ನಿಬಂಧನೆಗಳ ಪ್ರಕಾರ ದಂಡನೆಗೆ ಒಳಗಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಅವರು ಜಮ್ಮು-ಕಾಶ್ಮೀರದಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸ್ಪರ್ಧಾತ್ಮಕತೆ ಸುಧಾರಣೆ ಯೋಜನೆಗೆ (JKCIP) ಚಾಲನೆ ನೀಡಲಿದ್ದಾರೆ.

Leave a Reply

Your email address will not be published. Required fields are marked *