ಪೊಲೀಸ್ ಕಾಟ ಆರೋಪ: ವಿಧವೆ ನೇಣುಬಿಗಿದು ಸಾ*.

ಪೊಲೀಸ್ ಕಾಟ ಆರೋಪ: ವಿಧವೆ ನೇಣುಬಿಗಿದು ಸಾ*.

ವಾಟ್ಸಾಪ್ ಡೆತ್ ನೋಟ್‌ನಲ್ಲಿ ಪೊಲೀಸರ ಹೆಸರು ಉಲ್ಲೇಖ.

ಶಿವಮೊಗ್ಗ: ಪೊಲೀಸಪ್ಪನ ಕಾಟ ತಾಳಲಾರದೆ ವಿಧವೆ ಮಹಿಳೆ ವಾಟ್ಸಾಪ್​​ನಲ್ಲಿ ಡೆತ್ ನೋಟ್​ ಬರೆದಿಷ್ಟು ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಸ್ವಾತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತೀರ್ಥಹಳ್ಳಿ ಪೊಲೀಸ್​ ಸ್ಟೇಷನ್​ನಲ್ಲಿ ಕರ್ತವ್ಯ ನಿರ್ವಹಿಸುವ ಮೋಹನ್​ ಹೆಸರು ಡೆತ್ ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ತಂದೆ ಮತ್ತು ತಾಯಿ ಸಾವಿನಿಂದ ಹೆಣ್ಣು ಮಕ್ಕಳ್ಳಿಬ್ಬರು ಅನಾಥವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತಳ ಹೆತ್ತವರು ಟಾರ್ಚರ್ ಕೊಟ್ಟ ಪೋಲಿಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಡೆದಿದ್ದೇನು?

ಸ್ವಾತಿಗೆ ಮದುವೆ ಆಗಿ 7 ವರ್ಷವಾಗಿತ್ತು. ಒಂದು ವಾರದ ಹಿಂದಷ್ಟೇ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್,​ ಸ್ವಾತಿಗೆ ಫೇಸ್​ಬುಕ್​ನಲ್ಲಿ ಮೆಸೇಜ್ ಮಾಡಿದ್ದ. ಆತನ ಅಕೌಂಟ್​ ಅನ್ನು ಸ್ವಾತಿ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಪೋಲಿಸ್ ಬೇರೆ ಅಕೌಂಟ್​ ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಬಳಿಕ ಈತನ ಕಾಟ ತಾಳಲಾರದೆ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯೂ ಟೌನ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡೆತ್ ನೋಟ್ನಲ್ಲಿ ಏನಿದೆ?

ಸ್ವಾರಿ ಅಮ್ಮ. ನನ್ನ ಬಗ್ಗೆ ಇಲ್ಲದೆ ಇರುವುದು ಎಲ್ಲಾ ಕೆಟದಾಗಿ ಜನಗಳ ಹತ್ತಿರ ಮೋಹನ್​ ಹೇಳಿದ್ದಾರೆ. ನನಗೆ ತಡಿಯುವುದಕ್ಕೆ ಆಗುತ್ತಿಲ್ಲ. ನನ್ನ ಗಂಡ ಸತ್ತಿದು ಫುಲ್ ಡ್ರಿಂಕ್ಸ್ ಮಾಡಿ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಕೆಟದಾಗಿ ಜನಗಳ ಹತ್ತಿರ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತಾಯ್ತು. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ ಎಂದಿದ್ದಾರೆ.

ಅವರು ಯಾರು ಅಂತಾನೆ ನಂಗೆ ಗೊತ್ತಿಲ್ಲ. ಫೇಸ್​ಬುಕ್​ನಲ್ಲಿ ಮೆಸೇಜ್​​ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಸ್ವಾರಿ ಅಮ್ಮ ಎಂದು ಸ್ವಾತಿ ಡೆತ್ ನೋಟ್ ಬರೆದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *