ಮೆಗಾಸ್ಟಾರ್ ಕುಟುಂಬದ ಸೊಸೆ ಲಾವಣ್ಯಾ ತ್ರಿಪಾಠಿ ಪೊಲೀಸ್ ದೂರು.

ಮೆಗಾಸ್ಟಾರ್ ಕುಟುಂಬದ ಸೊಸೆ ಲಾವಣ್ಯಾ ತ್ರಿಪಾಠಿ ಪೊಲೀಸ್ ದೂರು.

ಆನ್ಲೈನ್ ಕಿರುಕುಳದ ವಿರುದ್ಧ ನಟಿ ದನಿ ಎತ್ತಿದರು.

ಮೆಗಾಸ್ಟಾರ್ ಕುಟುಂಬದ ಸೊಸೆ, ಸ್ವತಃ ಜನಪ್ರಿಯ ನಟಿಯಾಗಿರುವ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾವಣ್ಯಾ ತ್ರಿಪಾಠಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರೊಡನೆ ವಿವಾಹವಾಗಿದ್ದು ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾರೆ. ಇದೀಗ ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ದೂರು ನೀಡಿರುವುದು ಕುಟುಂಬದವರ ವಿರುದ್ಧ ಅಲ್ಲ ಬದಲಿಗೆ ಆನ್​​ಲೈನ್​​​ನಲ್ಲಿ ತಮಗೆ ಕಿರುಕುಳ ನೀಡುತ್ತಿರು ವ್ಯಕ್ತಿಗಳ ಬಗ್ಗೆ.

ಲಾವಣ್ಯಾ ತ್ರಿಪಾಠಿ ಅವರನ್ನು ಹಾಗೂ ಅವರ ಕುಟುಂಬದವರನ್ನು ಗುರಿ ಮಾಡಿಕೊಂಡು ಆನ್​​ಲೈನ್​​​ನಲ್ಲಿ ಕೆಲ ವ್ಯಕ್ತಿಗಳು ತೀವ್ರ ನಿಂದನೆ, ಅಶ್ಲೀಲ ಕಮೆಂಟ್​​ಗಳು, ಫೋಟೊ ತಿದ್ದಿ ಹಂಚಿಕೊಳ್ಳುವ ಕಾರ್ಯಗಳನ್ನು ಮಾಡುತ್ತಿದ್ದಾರಂತೆ. ಈ ಆನ್​​ಲೈನ್ ದೌರ್ಜನ್ಯ, ಹಿಂಸೆಯ ವಿರುದ್ಧ ದನಿ ಎತ್ತಿರುವ ನಟಿ ಲಾವಣ್ಯಾ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್​​ನ ಸೈಬರ್ ಪೊಲೀಸರಿಗೆ ನಟಿ ಲಾವಣ್ಯಾ ತ್ರಿಪಾಠಿ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವವರ ಖಾತೆಯ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.

ಲಾವಣ್ಯಾ ತ್ರಿಪಾಠಿ ಮೂಲತಃ ಉತ್ತರ ಪ್ರದೇಶದವರಾಗಿದ್ದು ನಟನೆ ಆರಂಭಿಸಿದ್ದು ತೆಲುಗು ಸಿನಿಮಾ ಮೂಲಕ. ಉತ್ತರ ಭಾರತ ಮೂಲದ ನಟಿ ಆಗಿದ್ದರೂ ಸಹ ಲಾವಣ್ಯಾ ನಟಿಸಿರುವುದು ಕೇವಲ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಮಾತ್ರ. ಲಾವಣ್ಯಾ ತ್ರಿಪಾಠಿ ಮತ್ತು ವರುಣ್ ತೇಜ್ ಅವರು 2017 ರಲ್ಲಿ ‘ಮಿಸ್ಟರ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ 2018 ರಲ್ಲಿ ‘ಅಂತರಿಕ್ಷಂ 9000 ಕೆಎಂಪಿಎಚ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದ್ದು 2023 ರಲ್ಲಿ ಈ ಜೋಡಿ ಮದುವೆ ಆದರು. ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *