ಪೂಜಾ ಗಾಂಧಿ ಅಭಿಮಾನಿಗಳಿಗೆ ಡಬಲ್ ಧಮಾಕಾ ಘೋಷಣೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಎಲ್ಲ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಬಂದು ಸಿನಿಮಾವನ್ನು ವೀಕ್ಷಿಸಿದ್ದಾರೆ. ನಟಿ ಪೂಜಾ ಗಾಂಧಿ ಅವರು ‘ದಿ ಡೆವಿಲ್’ ನೋಡಿದ ಬಳಿಕ ಮಾಧ್ಯಮಗಳ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು. ‘ದಿ ಡೆವಿಲ್ ಸಿನಿಮಾ ನೋಡಿ ತುಂಬಾ ಖುಷಿ ಆಗಿದೆ. ಮೊದಲನೆಯದಾಗಿ ನಾನು ಚಿತ್ರತಂಡಕ್ಕೆ ಶುಭಾಶಯ ಹೇಳುತ್ತೇನೆ.
ಈ ಬಾರಿ ದರ್ಶನ್ ಅಭಿಮಾನಿಗಳಿಗೆ ಡಬಲ್ ಧಮಾಕಾ. ಸಿನಿಮಾದ ಪ್ರತಿ ದೃಶ್ಯ, ಆ್ಯಕ್ಷನ್ ನನಗೆ ತುಂಬಾ ಇಷ್ಟ ಆಯಿತು. ನಾಯಕಿಯರಾದ ಶರ್ಮಿಳಾ ಮಾಂಡ್ರೆ ಮತ್ತು ರಚನಾ ರೈ ಅವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಡಬಲ್ ಧಮಾಕಾ ಅಂತ ಅಭಿಮಾನಿಗಳಿಗೆ ಹೇಳಲು ಇಷ್ಟಪಡುತ್ತೇನೆ. ಸಿನಿಮಾ ಸೂಪರ್ ಆಗಿದೆ. ಎಲ್ಲರೂ ಬಂದು ಚಿತ್ರಮಂದಿರದಲ್ಲಿ ನೋಡಿ’ ಎಂದು ಪೂಜಾ ಗಾಂಧಿ ಅವರು ಹೇಳಿದ್ದಾರೆ.
For More Updates Join our WhatsApp Group :




