ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ನಲ್ಲಿ ಲಂಪ್ಸಮ್ ಆಗಿ 1,000 ರೂನಿಂದ 30 ಲಕ್ಷ ರೂವರೆಗೂ ಹೂಡಿಕೆಗೆ ಅವಕಾಶ ಇದೆ. ಐದು ವರ್ಷಕ್ಕೆ ಮೆಚ್ಯೂರಿಟಿ ಆಗುವ ಈ ಸ್ಕೀಮ್ನಲ್ಲಿ ಸದ್ಯ ವಾರ್ಷಿಕ ಶೇ. 8.2 ಬಡ್ಡಿ ದರ ಇದೆ. ವರ್ಷದಲ್ಲಿ ಸುಮಾರು ಎರಡೂವರೆ ಲಕ್ಷ ರೂ ಬಡ್ಡಿ ಆದಾಯವೇ ಇದೆ.
ಪೋಸ್ಟ್ ಆಫೀಸ್ನಲ್ಲಿ ಹಲವಾರು ಸಣ್ಣ ಉಳಿತಾಯ ಯೋಜನೆಗಳು ಜಾರಿಯಲ್ಲಿವೆ. ಇವುಗಳ ಪೈಕಿ ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಅತ್ಯಧಿಕ ಬಡ್ಡಿ ನೀಡುತ್ತವೆ. ಎರಡಕ್ಕೂ ವಾರ್ಷಿಕ ಶೇ 8.2 ಬಡ್ಡಿ ನೀಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಅಕೌಂಟ್ ಹೆಣ್ಮಕ್ಕಳಿಗಾಗಿ ದೀರ್ಘಕಾಲ ಹೂಡಿಕೆ ಹೇಳಿ ಮಾಡಿಸಿದ್ದಾಗಿದೆ. ಇನ್ನೊಂದೆಡೆ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ (SCSSS) ಲಂಪ್ಸಮ್ ಹೂಡಿಕೆಯಿಂದ ನಿಯಮಿತ ಆದಾಯ ಪಡೆಯಲು ಸಹಾಯಕವಾಗಿದೆ.
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ ಬಗ್ಗೆ
- ಯಾರು ಅರ್ಹರು: 60 ವರ್ಷ ವಯಸ್ಸು ದಾಟಿದವರು
- ಹೂಡಿಕೆ ಮೊತ್ತ: 1,000 ರೂನಿಂದ ಹಿಡಿದು 30,00,000 (ಮೂವತ್ತು ಲಕ್ಷ) ರೂವರೆಗೂ ಲಂಪ್ಸಮ್ ಆಗಿ ಹೂಡಿಕೆ.
- ಹೂಡಿಕೆ ಅವಧಿ: 5 ವರ್ಷಕ್ಕೆ ಮೆಚ್ಯೂರಿಟಿ. ಬೇಕೆಂದರೆ ಪ್ರತೀ 3 ವರ್ಷಕ್ಕೊಮ್ಮೆ ನವೀಕರಿಸಬಹುದು.
- ಬಡ್ಡಿ: ಸದ್ಯಕ್ಕೆ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ. ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ ಆಗುತ್ತದೆ.
- ಆದಾಯ ಹೇಗೆ?: ಪ್ರತೀ ತ್ರೈಮಾಸಿಕಕ್ಕೊಮ್ಮೆ ಬಡ್ಡಿಯನ್ನು ನೀಡಲಾಗುತ್ತದೆ.
For More Updates Join our WhatsApp Group :




