ದೀಪಿಕಾ ಪಡುಕೋಣೆ ಸ್ಥಾನಕ್ಕೆ ಸಾಯಿ ಪಲ್ಲವಿ.
ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ. ದಕ್ಷಿಣದ ಕೆಲ ದೊಡ್ಡ ಸ್ಟಾರ್ ನಟರುಗಳಿಗೆ ಇರುವಂತೆಯೇ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ತಮ್ಮ ಅದ್ಭುತ ನಟನೆ, ಅಂದ ಮತ್ತು ನೃತ್ಯ ಪ್ರತಿಭೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸಾಯಿ ಪಲ್ಲವಿ, ಸಿನಿಮಾ ಮಾತ್ರವಲ್ಲದೆ ಪರದೆಯ ಹಿಂದೆಯೂ ತಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ, ಯಾವುದೇ ಸಿನಿಮಾನಲ್ಲಿ ನಟಿಸಲು ಸಿನಿಮಾದ ಕತೆಯೇ ಮುಖ್ಯ, ಸ್ಟಾರ್ ನಟ ಇದ್ದಾರೆಂಬ ಕಾರಣಕ್ಕೆ ಸಿನಿಮಾನಲ್ಲಿ ನಟಿಸುವುದಿಲ್ಲ ಅವರು. ಇದೀಗ ಅವರು ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಆದರೆ ಪ್ರಭಾಸ್ಗೆ ಜೋಡಿ ಆಗಿ ಅಲ್ಲ.
ಹೌದು, ಪ್ರಭಾಸ್ ಜೊತೆಗೆ ನಾಯಕಿಯಾಗಿ ನಟಿಸಲು ಭಾರತದ ಟಾಪ್ ನಟಿಯರೇ ಸಾಲು ಗಟ್ಟಿ ನಿಂತಿದ್ದಾರೆ. ಆದರೆ ಸಾಯಿ ಪಲ್ಲವಿ ಆ ಸಾಲಿನಲ್ಲಿಲ್ಲ. ಆದರೂ ಅವರಿಗೆ ಪ್ರಭಾಸ್ ಸಿನಿಮಾನಲ್ಲಿ ನಟಿಸುವ ಅವಕಾಶ ದೊರೆತಿದೆ. ವಿಶೇಷವೆಂದರೆ ಇಬ್ಬರೂ ಒಟ್ಟಿಗೆ ನಟಿಸಲಿರುವ ಈ ಸಿನಿಮಾನಲ್ಲಿ ಪ್ರಭಾಸ್ ಹಾಗೂ ಸಾಯಿ ಪಲ್ಲವಿ ಜೋಡಿಯಾಗಿ ನಟಿಸುತ್ತಿಲ್ಲ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಗೊತ್ತೇ ಇದೆ. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಶೀಘ್ರ ಆರಂಭ ಆಗಲಿದೆ. ಆದರೆ ಸಿನಿಮಾದ ಮೊದಲ ಭಾಗದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ ಎರಡನೇ ಭಾಗದಿಂದ ಹೊರಗೆ ನಡೆದಿದ್ದಾರೆ, ಅಥವಾ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆ. ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದ ಪಾತ್ರದಲ್ಲಿ ಈಗ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
For More Updates Join our WhatsApp Group :




