ಪ್ರಗತಿ ವಿಶೇಷ || ಮಾನವ ಕುಲಕ್ಕೆ ಮಾರಕವಾಗಿರುವ ಈಡೀಸ್ ಕುಲದ ಸೊಳ್ಳೆಗಳು

ವಿಶ್ವದಾದ್ಯಂತ ವಿಜ್ಞಾನಿಗಳಿಂದ ಗುರುತಿಸಲ್ಪಟ್ಟಿರುವ ಎಲ್ಲಾ ಕುಲದ ಸೊಳ್ಳೆಗಳನ್ನು ಕ್ಯೂಲಿಸೀಡೆ ಕುಟುಂಬಕ್ಕೆ ಸೇರಿಸಲಾಗಿದೆ.  ಕ್ಯೂಲಿಸಿಡೆ ಕುಟುಂದಲ್ಲಿನ ಅನಾಪೀಲಿಸ್, ಈಡೀಸ್, ಕ್ಯೂಲೇಕ್ಸ್, ನ್‌ಸೋನಿಯಾ, ಹೆಮೋಗೋಗಸ್, ಸೋರೋಪೊರಾ, ಕುಲದ ಸೊಳ್ಳೆಗಳು ರೋಗವಾಹಕಗಳಾಗಿದ್ದು, ಇವುಗಳಲ್ಲಿ ಇತ್ತೀಚಿಗೆ ಈಡೀಸ್ ಕುಲದ ಈಡೀಸ್ ಇಜೀಪ್ಟೆöÊ,  ಮತ್ತು ಈಡೀಸ್ ಅಲ್ಬಾಫೀಕ್ಟಸ್ ಜಾತಿಯ ಸೊಳ್ಳೆಗಳು ಡೆಂಗ್ಯೂ ಜ್ವರ ರೋಗವನ್ನು, ಚಿಕೊಂಗುನ್ಯ ಜ್ವರ, ಯಲ್ಲೋ ಫೀವರ್ (ಹಳದಿ ಜ್ವರ), ಜೀಕಾ ವೈರಲ್ ಜ್ವರ, ವೆಸ್ಟ್ನೈಲ್ ವೈರಸ್ ಜ್ವರವನ್ನು ಒಬ್ಬರಿಂದ ಇನ್ನೋಬ್ಬರಿಗೆ ಹರಡಲು ಸಾಮರ್ಥ್ಯವನ್ನು ಹೊಂದಿರುವುದರಿAದ ಮನುಷ್ಯ ಕುಲಕ್ಕೆ ಮಾರಕವಾಗುತ್ತಿವೆ. 

ಪ್ರಕೃತೀಯ ಎಲ್ಲಾ ತರಹದ ವಾತವಾರಣಕ್ಕೆ ಬಹು ಬೇಗನೇ ಹೊಂದಿಕೊಳ್ಳುವ ಈಡೀಸ್ ಕುಲದ ಸೊಳ್ಳೆಗಳು ವಿಶ್ವದಾದ್ಯಂತ ಕಾಣಸಿಗುತ್ತವೆ. ವಿಜ್ಞಾನಿಗಳು, ಸಂಶೋದಕರ ಪ್ರಕಾರ ವಾತವರಣದಲ್ಲಿನ ಮಾನವನ  ಪರಿಸರ ನಾಶಪಡಿಸುವ ಚಟುವಟಿಕೆಯಿಂದ ಹವಮಾನ ವೈಪರೀತ್ಯದಿಂದಗಿ ಸೋಳ್ಳೆಗಳ ಸಂತೋನೋತ್ಪತ್ತಿ, ಅಭಿವೃದ್ದಿಗೆ ಪೂರಕವಾಗಿದೆ. ಇತ್ತಿಚೀನ ದಿನಗಳಲ್ಲಿ ಡೆಂಗ್ಯೊ ಜ್ವರವು ಸಾಮಾನ್ಯವಾಗಿ ಹರಡುವ ರೋಗವಾಗಿ ಸಾರ್ವಜನಿಕರಿಗೆ ಅತ್ಯಂತ ಸವಾಲು ಮತ್ತು ಸಮಸ್ಯತ್ಮಾಕವಾದ ಖಾಯಿಲೆಗಳಲ್ಲಿ  ಮೂಂಚೂಣಿಯಲ್ಲಿದೆ. ಡೆಂಗ್ಯೊ ಜ್ವರ ಸೊಂಕಿತ ಪ್ರಕರಣಗಳು ಎಲ್ಲಾ ದೇಶಗಳಲ್ಲಿ ಜಾಸ್ತಿಯಾಗುತ್ತಿವೆ. ಅಂದರೇ ಪ್ರಪಂಚದ ಅರ್ಧದಷ್ಟು ಜನರು ಪ್ರತಿ ವರ್ಷ ಸೊಂಕಿತರಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ತಿಳಿಸುತ್ತಿವೆ. ಭಾರತದಲ್ಲಿ ಡೆಂಗ್ಯೊ ಜ್ವರಕ್ಕೆ ನಿರ್ದಿಷ್ಟವಾದ ಔಷದಿ ಚಿಕಿತ್ಸೆಗಳು ಲಭ್ಯವಿಲ್ಲ. ಡೆಂಗ್ಯೋ ಜ್ವರವನ್ನು ನಿರ್ಲಕ್ಷಿಸಿದರೇ ಸಾವು ಕಟ್ಟಿಟ್ಟ ಬುತ್ತಿ. ಅದಕ್ಕಾಗಿಯೇ “ಡೆಡ್ಲಿ ಡೆಂಗ್ಯೊ ಜ್ವರ ” ಎಂದು ಕರೆಯಲಾಗುತ್ತದೆ. ಈಡೀಸ್ ಕುಲದ ಸೊಳ್ಳೆಗಳಲ್ಲಿ ಡೆಂಗ್ಯೂ ಜ್ವರಕ್ಕೆ ಕಾರಣವಾದ ರೋಗಕಾರಕ ಡೆಂಗ್ಯೋ ವೈರಸ್‌ಗಳು ಟ್ರಾನ್ಸ್ವೋವೇರೀಯನ್ ಟ್ರಾನ್ಸ್ಮೀಷನ್ ಅಂದರೇ ಡೆಂಗ್ಯೋ ಸೋಂಕಿತ  ಈಡೀಸ್ ತಾಯಿ ಸೊಳ್ಳೆಯು ಸಂತಾನೋತ್ಪತ್ತಿಲ್ಲಿ ಡೆಂಗ್ಯೂ ವೈರಾಣುಗಳು ಮೊಟ್ಟೆಗಳಿಗೂ ಸಹಾ ಸೋಂಕುವನ್ನು ವರ್ಗಯಿಸುತ್ತವೆ. ತದನಂತರ ಡೆಂಗ್ಯೊ ವೈರಾಣು ಹೊಂದಿರುವ ಸೊಳ್ಳೆ ಮೊಟ್ಟೆಗಳು ಒಡೆದು ಲಾರ್ವಗಳಾಗಿ, ಪ್ಯೋಪಗಳಾಗಿ ನಂತರ ಸೊಳ್ಳೆಗಳು ಅದಾಗ ಆ ಸೊಳ್ಳೆಗಳು ರೋಗಕಾರಕವನ್ನು ಹರಡಲು ಸಮರ್ಥವಾಗಿರುತ್ತವೆ.

ರೋಗಕಾರಕ ಡೆಂಗ್ಯೊ ವೈರಸ್ ಕುರಿತು:

ಆರ್ಬೋವೈರಸ್ ಗಳಲ್ಲಿ ಪ್ಲೇವಿ ವೈರಸ್ ಮುಖ್ಯವಾಗಿದೆ. ಡೆಂಗ್ಯೋ ಜ್ವರದ ರೋಗಕಾರಕವಾದ ಪ್ಲೇವಿವೈರಸ್ ವೈರಾಣು ನಾಲ್ಕು ತಳಿಗಳು ಹೊಂದಿರುತ್ತವೆ.,

ಡೆಂಗ್ಯೊ ಜ್ವರ: ಭಾರತದೇಶದ ತಮಿಳುನಾಡಿನ ವೆಲ್ಲೂರಿನಲ್ಲಿ 1956ರಲ್ಲಿ ಪ್ರಥಮವಾಗಿ ಡೆಂಗ್ಯೊ ಜ್ವರ ಪ್ರಕರಣ ವರದಿಯಾಗಿತ್ತು. ಈಡೀಸ್ ಇಜೀಪ್ಟೆöÊ ಮತ್ತು ಈಡೀಸ್ ಆಲ್ಬಾಪೀಕ್ಟಸ್ ಹೆಣ್ಣು ಜಾತಿಯ ಸೊಳ್ಳೆಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಮಿಕ ಖಾಯಿಲೆಯಾಗಿದೆ. ಮೂರು ಹಂತದಲ್ಲಿ ಡೆಂಗ್ಯೊ ಜ್ವರವನ್ನು (ಡೆಂಗ್ಯೊ ಜ್ವರ ಹಂತ, ಡೆಂಗ್ಯೊ ಜ್ವರ ರಕ್ತಸ್ರಾವ ಹಂತ, ಡೆಂಗ್ಯೊ ಜ್ವರ ಪ್ರಜ್ಞಾಹೀನ ಹಂತ) ಗುರುತಿಸಲಾಗುತ್ತದೆ ಮತ್ತು ನಿಯಂತ್ರಣ ಮಾಡಬಹುದಾದ ಪ್ರಮುಖ ಸಾಂಕ್ರಮಿಕ ಖಾಯಿಲೆ. ಡೆಂಗ್ಯೊ ಜ್ವರವು ಮೊದಲನೇ ಬಾರಿ ಕಾಣಿಸಿಕೊಂಡಗ ಪ್ರಥಮ ಡೆಂಗ್ಯೊ ಜ್ವರ ಸೊಂಕಿತ ವ್ಯಕ್ತಿ ಎಂದು ಕರೆಯುತ್ತೇವೆ. ಅದೇ ವ್ಯಕ್ತಿಗೆ ಪುನಃ ಡೆಂಗ್ಯೊ ಜ್ವರ ಬಂದರೇ ದ್ವಿತೀಯ ಡೆಂಗ್ಯೋ ಜ್ವರ ಸೊಂಕಿತ ವ್ಯಕ್ತಿ ಎಂದು ಕರೆಯುತ್ತೇವೆ ಹಾಗೂ ಮೊದಲನೇ ಸಾರಿ ಸೊಂಕು ಉಂಟುಮಾಡಿದ ಡೆಂಗ್ಯೋ ವೈರಸ್ ತಳಿಯು ಹೊರತುಪಡಿಸಿ,  ಉಳಿಕೆಯ ಮೂರು ತಳಿಗಳಲ್ಲಿ ಯಾವೂದಾದರೂ ತಳಿಯಿಂದ  ಡೆಂಗ್ಯೋ ಜ್ವರ ಬಂದಿದ್ದರೇ ದ್ವಿತೀಯ ಡೆಂಗ್ಯೊ ಜ್ವರ ಸೊಂಕಿತ ವ್ಯಕ್ತಿ ಹೆಚ್ಚು ಅಪಾಯದಲ್ಲಿ ಇರುತ್ತಾನೆ.

ಪ್ರಕೃತಿದತ್ತವಾಗಿ ಸೊಳ್ಳೆಗಳಿಗೆ ಮನುಷ್ಯನನ್ನು ಗುರುತಿಸಲು ಸುಕ್ಷವಾದ ಸಂಯೋಜಿತ ಕಣ್ಣುಗಳು,  ಅಂಟೇನಾಗಳಿAದ ಸಹಾಯದಿಂದ ಮನುಷ್ಯ ದೇಹದ ಬೆವರಿನಿಂದ ಬರುವ ವಾಸನೆಯಿಂದ ಗುರುತಿಸಿಕೊಂಡು ಕಡಿದು ರಕ್ತವನ್ನು ಹೀರಿಕೊಳ್ಳುತ್ತವೆ.  ಇತರೇ ಪ್ರಾಣಿಗಳ ದೇಹದ ಬೆವರಿನಿಂದ ಬರುವ ವಾಸನೇಗಿಂತ ಮಾನವ ದೇಹದ ಬೆವರು ವಾಸನೆಗೆ ಜಾಸ್ತಿ ಅಕರ್ಷಿತವಾಗುತ್ತವೆ. ಮನುಷ್ಯನಿಂದ ರಕ್ತ ಹೀರಿಕೊಳ್ಳುವಾಗ ಸಾಂಕ್ರಮಿಕ ಖಾಯಿಲೆಯ ರೋಗಕಾರಕಗಳು (ಪ್ಯಾಥೋಜೀನ್/ಪರಾವಲಂಬಿಗಳು) ಸೊಳ್ಳೆಯ ದೇಹವನ್ನು ಪ್ರವೇಶ ಪಡೆದುಕೊಂಡು, ವೃದ್ದಿಯಾಗಿ ಲಾಲಾರಸದಲ್ಲಿ ಬಂದು ಸೇರಿಕೊಳ್ಳುತ್ತವೆ. ಅಂತಹ ಸೊಳ್ಳೆಗಳನ್ನು ಸೊಂಕಿತ ಫ್ರೌಢವಸ್ಥೆ ಸೊಳ್ಳೆ ಎಂದು ಕರೆಯಲಾಗುತ್ತದೆ. ಪುನಃ ಆರೋಗ್ಯವಂತ ಮನುಷ್ಯನನ್ನು ಕಚ್ಚಿದಾಗ ರೋಗಕಾರಕಗಳು ಮಾನವನ ದೇಹಕ್ಕೆ ಸೇರಿಕೊಳ್ಳುತ್ತವೆ.

ಈಡೀಸ್ ಕುಲದ ಸೊಳ್ಳೆಗಳು ವಿಶೇಷತೆಂದರೇ ಫ್ರೌಢವಸ್ಥೆ ಹೆಣ್ಣು ಸೊಳ್ಳೆಗಳು ಮೊಟ್ಟೆಗಳನ್ನು ಸ್ವಲ್ಪ ನೀರು ಸಂಗ್ರವಾಗಿರುವ ಪರಿಕರಗಳನ್ನು ಸಂತಾನೊತ್ಪತ್ತಿಗೆ ಸ್ಥಳಗಳನ್ನು ಅಯ್ಕೆ ಮಾಡಿಕೊಳ್ಳುತ್ತವೆ.  ಮನೆಯ ಒಳಾಂಗಣ, ಹೊರಾಂಗಣ ಪರಿಕರಗಳಲ್ಲಿ ಸಂಗ್ರವಾಗಿರುವ ನೀರಿನ ತೇವಾಂಶದ ಮೇಲ್ಮೆöÊ ಸ್ಥಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ನೀರಿನ ಸಂಪರ್ಕಕ್ಕೆ ಬರುವ ತನಕ ಕನಿಷ್ಠ ಒಂದು ವರ್ಷಗಳ ಕಾಲ ಜೀವಂತವಾಗಿರುತ್ತವೆ. ನೀರಿನ ಸಂಪರ್ಕಕ್ಕೆ ಬಂದಾಗ ಮೊಟ್ಟೆಗಳು ಲಾರ್ವಗಳಾಗಿ, ಪ್ಯೊಪಗಳಾಗಿ ನೀರಿನಲ್ಲಿ ಬೆಳವಣಿಗೆಯಾಗಿ ನಂತರ ಫ್ರೌಢವಸ್ಥೆಯ ಸೊಳ್ಳೆಗಳು ರೋಗವಾಹಕಗಳಾಗಿ ಮಾನವ ಕುಲಕ್ಕೆ ಮಾರಕವಾಗಿವೆ. ರೋಗವಾಹಕಗಳನ್ನು ನಿಯಂತ್ರಣ, ನಿರ್ಮೂಲನೆ ಮಾಡಲು ಅವುಗಳ ಜೀವನಚಕ್ರ (ಜೀವಶಾಸ್ತç)  ತಿಳಿದು ಕೊಳ್ಳುವುದು ಅಗತ್ಯ. ಎಲ್ಲಾ ಕುಲದ ಜಾತಿಯ ಸೊಳ್ಳೆಗಳು ಸುಮಾರು 42-56 ದಿನಗಳು ಜೀವಿತವಾಧಿಯನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿಯ ಅಭಿವೃದ್ದಿಗಾಗಿ ಫ್ರೌಢವಸ್ಥೆಯ ಗಂಡು ಮತ್ತು ಹೆಣ್ಣು ಸೊಳ್ಳೆಗಳು (ಮಿಲನ) ಲೈಂಗಿಕ ಕ್ರೀಯೆಯಲ್ಲಿ ತೊಡಗಿಕೊಂಡು, ಹೆಣ್ಣು ಸೊಳ್ಳೆಗಳು ಮೊಟ್ಟೆಗಳ ಉತ್ಪಾದನೆ, ಬೆಳವಣಿಗಾಗಿ ಪ್ರೋಟೀನ್ ಅವಶ್ಯಕತೆಗಾಗಿ ಮನುಷ್ಯನ ಆಥಾವ ಪ್ರಾಣಿಗಳ ರಕ್ತ ಹೀರಿಕೊಳ್ಳುತ್ತವೆ. ನಾಲ್ಕು ಹಂತಗಲ್ಲಿ ಮೊಟ್ಟೆ. ಲಾರ್ವ, ಪ್ಯೋಫ, ಫ್ರೌಢವಸ್ಥೆ ಸೊಳ್ಳೆ. ಜೀವಿತವಾಧಿ ಪೊರೈಸುತ್ತವೆ. ಮೊಟ್ಟೆ. ಲಾರ್ವ, ಪ್ಯೋಪ, ಮೂರು ಹಂತಗಳು ನೀರಿನ ಆಶ್ರಯವಿದ್ದಾಗ ಮಾತ್ರ ಜೀವಂತವಾಗಿದ್ದು ಕನಿಷ್ಠ ಹದಿನಾಲ್ಕರಿಂದ ಇಪ್ಪತ್ತೊಂದು ದಿನಗಳು ಬೇಕಾಗುತ್ತದೆ. ಈಡೀಸ್ ಕುಲದ ಸೊಳ್ಳೆಗಳು ಮುಖ್ಯವಾಗಿ  ಸ್ವಚ್ಚವಾದ ಮತ್ತು ಕಡಿಮೆ ಪ್ರಮಾಣ ನೀರು ಸಂಗ್ರವಾಗುವ ಪರಿಕರಗಳಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನೊತ್ತಪತ್ತಿ ಮಾಡಲು ಇಷ್ಟಪಡುತ್ತವೆ. ಪ್ರತಿಯೊಬ್ಬರ ಮನೆಯ ಸುತ್ತಮೂತ್ತಲೂ ಅನುಪಯುಕ್ತವಾಗಿರುವ ತೆಂಗಿನ ಚಿಪ್ಪುಗಳು, ಓರಳು ಕಲ್ಲು, ಟೈರುಗಳು, ಪ್ಲಾಸ್ಟೀಕ್ ಲೋಟಗಳು, ಓಡೆದು ಹೋಗಿರುವ ಮಣ್ಣಿನ ಮಡಕೆಗಳು,  ಪರಿಸರದಲ್ಲಿ ಮರದ ಪೋಟರೆಗಳಲ್ಲಿ, ಅನಾನಸ್ ಸಸ್ಯದ ಎಲೆಗಳಲ್ಲಿ ಸಂಗ್ರವಾಗುವ ನೀರು, ರಬ್ಬರ್ ಸಂಗ್ರಹಿಸಲು ಉಪಯೋಗಿಸುವ ಪ್ಲಾಸ್ಟೀಕ್ ಕಪ್ಪುಗಳಲ್ಲಿ ಸಂಗ್ರವಾಗುವ ನೀರು, ಇನ್ನಿತರೇ ಅಲ್ಪ ಪ್ರಮಾಣದ ಸ್ವಚ್ಚವಾದ ನೀರು ಸಂಗ್ರವಾಗುವ ಪರಿಕರಗಳು. ಅದ್ದರಿಂದಲೇ ಪ್ರತಿ ವಾರಕ್ಕೆ ಒಂದು ದಿನ ನಾವುಗಳು ಬಳಕೆಗೆ ಸಂಗ್ರಸಿರುವ ನೀರುಗಳಲ್ಲಿ ಸಂತಾನೊತ್ಪತ್ತಿಯನ್ನು ನಾಶಮಾಡಲು “ವಾರದ ಓಣಗಲು ದಿನ” ಅಚರಣೆ ಅತೀ ಮುಖ್ಯವಾದ ಪಾತ್ರ ವಹಿಸುತ್ತದೆ. ಯಾವೂದೇ ಹಂತದಲ್ಲಿರುವ ಸೊಳ್ಳೆಯನ್ನು ಮುಂದಿನ ಹಂತದ ಬೆಳವಣಿಗೆಯಾಗದಂತೆ ನಾಶಪಡಿಸುವುದೇ “ವಾರದ ಓಣಗಲು ದಿನ” ಅಚರಣೆಯ ಮುಖ್ಯ ಗುರಿಯಾಗಿದೆ. ಡೆಂಗ್ಯೊ ಜ್ವರವು ಸೊಂಕು ಉಂಟಾಗಲು ಮೂರು ಮುಖ್ಯವಾದವುಗಳು. ರೋಗಕಾರಕ, ರೋಗವಾಹಕ, ರೋಗವಾಹಕ ಉತ್ಪತ್ತಿ ತಾಣಗಳು, ತ್ರೀಕೋನವಾಗಿ ಒಂದಕ್ಕೊAದು ಪುರಕವಾಗಿ ಡೆಂಗ್ಯೊ ಜ್ವರ ಸೊಂಕು ಹರಡಲು ಕಾರಣವಾಗಿವೆ. ರೋಗವಾಹಕ ಉತ್ಪತ್ತಿ ತಾಣಗಳನ್ನು ಗುರುತಿಸಿ ನಿರ್ಮೂಲನೆ ಮಾಡಿದರೇ ಡೆಂಗ್ಯೊ ಜ್ವರ ಸಂರ್ಪೂಣವಾಗಿ ನಿಯಂತ್ರಣದಲ್ಲಿ ಇಡಬಹುದು.

ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಬಳಸುವ ವಿಧಾನಗಳು

•          ಸಾರ್ವಜನಿಕರು ಮೈ ತುಂಬಾ ಬಟ್ಟೆಗಳನ್ನು  ಧರಿಸಿಕೊಳ್ಳುವುದರಿಂದ ಸೊಳ್ಳೆಯ ಕಡಿತದಿಂದ ತಪ್ಪಿಸಿ ಕೊಳ್ಳಬಹುದು

•          ಹಗಲು ಮತ್ತು ರಾತ್ರಿ ವೇಳೆಯಲ್ಲಿ ವಿಶ್ರಾಂತಿ ಆಥಾವಾ ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಹಾಗೂ ಮನೆಯ ಕಿಟಕಿಗಳಿಗೆ ಹಾಕಿಸುವುದು.  ಕೀಟನಾಶಕ ಲೇಪಿತ ಸೊಳ್ಳೆಪರದೇಗಳನ್ನು (ಐ.ಟಿ.ಎನ್) ಮತ್ತು (ಎಲ್.ಎಲ್.ಐ.ಎನ್) ಬಳಕೆ ಉತ್ತಮವಾದುದ್ದು.,

•          ವಿವಿಧ ರೀತಿಯ ಸೊಳ್ಳೆ ನಿವಾರಕಗಳಾದ ರಾಸಾಯನಿಕ (ಆಇಇಖಿ) ಸಂಯೋಜನೆಯಿAದ ತಯಾರಿಸಲ್ಪಟ್ಟಿರುವ ದ್ರವಲೇಪನಗಳು (ಓಡಮಾಸ್), ಸೊಳ್ಳೆ ಬತ್ತಿಗಳು (ಮಸ್ಕೀಟೋ ಕಾಯಲ್), ಅವಿಕಾರಕಗಳು (ಗುಡ್‌ನೈಟ್), ಸೊಳ್ಳೆಗಳ ನಿವಾರಕ ನಿರೋಧಕಗಳು,

•          ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚಾಗಿ ಸೊಳ್ಳೆ ಪರದೇಗಳನ್ನು ಬಳಕೆ ಮಾಡಲು ಶಿಫಾರಸ್ಸು ಮಾಡಿದೆ. ದೀರ್ಘಕಾಲ ಬಾಳಿಕೆ ಬರುವ ಕೀಟನಾಶಕ  ಸೊಳ್ಳೆ ಪರದೆಗಳು(ಎಲ್.ಎಲ್.ಐ.ಎನ್): ಕೀಟನಾಶವನ್ನು ಸಂಯೋಜಿಸಿ ತಯಾರು ಮಾಡಲಾಗಿರುತ್ತದೆ. ಸೊಳೆಪರದೇ (ಹತ್ತಿರ) ಸಂಪರ್ಕಕ್ಕೆ ಬರುವ ಸೊಳ್ಳೆಗಳು ಸಾಯುತ್ತವೆ ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಸೊಳ್ಳೆಪರದೇ ಬಳಸಿ ಕೊಳ್ಳಬಹುದು. ಸೊಳ್ಳೆಗಳ ಕಡಿತದಿಂದ ತಪ್ಪಿಸಿ ಕೊಳ್ಳಬಹುದು.

•          ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳು(ಐ.ಟಿ.ಎನ್): ಕೀಟನಾಶದ ದ್ರಾವಣದಲ್ಲಿ ಸೊಳ್ಳೆ ಪರದೇಯನ್ನು ನೆನೆಯಲು ಇಡುವುದು. ನಂತರ ಒಣಗಿಸಿ ಬಳಕೆ ಮಾಡಿಕೊಳ್ಳಬಹುದು. ಸೊಳ್ಳೆಪರದೇ (ಹತ್ತಿರ) ಸಂಪರ್ಕಕ್ಕೆ ಬರುವ ಸೊಳ್ಳೆಗಳನ್ನು ಹಿಮ್ಮೆಟ್ಟಿಸುತ್ತವೆ. ಒಂದು ವರ್ಷಗಳ ಕಾಲ ಬಳಸಿಕೊಂಡ ನಂತರ ಪುನಃ ಕೀಟನಾಶದ ದ್ರಾವಣದಲ್ಲಿ ಸೊಳ್ಳೆ ಪರದೇಯನ್ನು ನೆನೆಯಲು ಇಡುವುದು.

  • ಶೇಷಾದ್ರಿ,ಡಿ.ಎನ್.
  • ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ. ಪ್ರಾಥಮಿಕ ಆರೋಗ್ಯ ಕೇಂದ್ರ. ಹೊಸಕೆರೆ. ಮಧುಗಿರಿ.

Leave a Reply

Your email address will not be published. Required fields are marked *