ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಕೈದಿ ಸಮವಸ್ತ್ರ ಹಾಗೂ ಸಂಖ್ಯೆ ನೀಡಲಾಗಿದೆ. ಅವರ ಕೈದಿ ನಂ. 15528 ಆಗಿದ್ದು, ಸಜಾಬಂಧಿ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ.
ಕೈದಿಗಳು ಕಡ್ಡಾಯವಾಗಿ 8 ಗಂಟೆ ಕೆಲಸ ಮಾಡಬೇಕು. ಪ್ರಾರಂಭದಲ್ಲಿ ದಿನಕ್ಕೆ 524 ರೂ. ದಿನಗೂಲಿ ನೀಡಲಾಗುತ್ತದೆ. ಒಂದು ವರ್ಷದ ನಂತರ 548 ರೂ. ನೀಡಲಾಗುತ್ತದೆ. ಎರಡು ವರ್ಷದ ನಂತರ ಕೆಲಸದಲ್ಲಿ ಬಡ್ತಿ ನೀಡಿ, 615 ರೂ. ನೀಡಲಾಗುತ್ತದೆ. ಮೂರು ವರ್ಷದ ನಂತರ 663 ರೂ.ಗೆ ಏರಿಸಲಾಗುತ್ತದೆ. ಅವರಿಗೆ ಬೇಕರಿ, ಗಾರ್ಡನ್ ಕೆಲಸ, ಹೈನುಗಾರಿಕೆ, ಮರಗೆಲಸ, ತೋಟದಲ್ಲಿ ಕೆಲಸ, ಸ್ವಚ್ಚತೆ ಕೆಲಸ ಆಯ್ಕೆಗೆ ಅವಕಾಶ ನೀಡಲಾಗಿದೆ
ಜೈಲಿನಲ್ಲಿ ಯಾರೊಂದಿಗೂ ಮಾತಾಡದೇ ಮಾತಾಡದೇ ಮೌನವಾಗಿದ್ದಾರೆ ಎಂದು ತಿಳಿದು ಬಂದಿದೆ.