ಬಿಮಲ್ ಓಬೆರಾಯ್ ಜೂನಿಯರ್ ಎನ್ಟಿಆರ್ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಮುಂದಾಗುತ್ತಾರಾ?
ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಬಳಿಕ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯಿತು. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಈ ಚಿತ್ರಕ್ಕೆ ‘ಧುರಂಧರ್’ ನಟನ ಎಂಟ್ರಿ ಆಗಿದೆ. ಅದೂ ವಿಲನ್ ಆಗಿ ಎನ್ನಲಾಗುತ್ತಿದೆ.
‘ಧುರಂಧರ್’ ಹಾಗೂ ‘ಧುಂಧರ್ 2’ ಚಿತ್ರವನ್ನು ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದರು. ಈ ಎರಡೂ ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ಧುರಂಧರ್’ ಸಿನಿಮಾ 1300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ‘ಧುರಂದರ್ 2’ ಸಿನಿಮಾ 2 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಶಿರಾನಿ ಬಲೂಚ್ ಪಾತ್ರದಲ್ಲಿ ಬಿಮಲ್ ಓಬೆರಾಯ್ ಕಾಣಿಸಿಕೊಂಡಿದ್ದರು.
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಚಿತ್ರದ ಶೂಟ್ ನಿರಂತರವಾಗಿ ವಿಳಂಬ ಆಗುತ್ತಿದೆ, ಸಿನಿಮಾ ನಿಂತು ಹೋಗುತ್ತದೆ ಎಂಬೆಲ್ಲ ವರದಿ ಇದ್ದವು. ಅದ್ಯಾವುದೂ ಸತ್ಯವಾಗಿಲ್ಲ.
For More Updates Join our WhatsApp Group :




