‘ಮೆಟ್ಟಿಲು ಜಾರಿ ಸಾ*’ ಎಂದು ಗಂಡನ ಸುಳ್ಳು…
ಧರ್ಮಪುರಿ : ಗರ್ಭಿಣಿಯೊಬ್ಬರ ಅನಿರೀಕ್ಷಿತ ಸಾವು ಪೊಲೀಸರ ನಿದ್ರೆಗೆಡಿಸಿತ್ತು. ಆಕೆ ಮೆಟ್ಟಿಲಿನಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಗಂಡ ಪೊಲೀಸರಿಗೆ ತಿಳಿಸಿದ್ದ. ಆದರೆ, ಅಸಲಿ ಸಂಗತಿ ಬೇರೆಯೇ ಇತ್ತು. ಧರ್ಮಪುರಿಯಲ್ಲಿ ಈ ತಿಂಗಳ ಆರಂಭದಲ್ಲಿ ಮನೆಯಲ್ಲಿಯೇ ಗರ್ಭಪಾತ ಮಾಡುವಾಗ ಆಕೆ ಸಾವನ್ನಪ್ಪಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ.
ಎರಿಯೂರು ಬಳಿಯ ಪೂಚೂರಿನ 26 ವರ್ಷದ ಕೆ. ರಮ್ಯಾ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದು, ಇತ್ತೀಚೆಗೆ ಮತ್ತೆ ಗರ್ಭಿಣಿಯಾಗಿದ್ದರು. ಡಿಸೆಂಬರ್ 1ರಂದು ಆಕೆ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅವರ ಪತಿ ಕಣ್ಣನ್ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದರು. ಆದರೆ, ಆಕೆಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಎರಿಯೂರು ಪೊಲೀಸರು ಕೇಸ್ ದಾಖಲಿಸಿದ್ದರು.
ಆ ಮಹಿಳೆಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ರಮ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಈಗ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿರುವುದರಿಂದ ಕಣ್ಣನ್ ಅವರಿಗೆ ಯಾವ ರೀತಿಯ ಮಗು ಜನಿಸುತ್ತದೆ ಎಂದು ನೋಡಲು ಕುತೂಹಲ ಹೆಚ್ಚಾಗಿತ್ತು. ಕಣ್ಣನ್ ತನಗೆ ಮಗನೇ ಬೇಕೆಂದು ಹಠ ಹಿಡಿದಿದ್ದ. ಆದರೆ, ಅವರಿಗೆ ಹೆಣ್ಣುಮಗು ಹುಟ್ಟಲಿದೆ ಎಂಬುದು ಸ್ಕ್ಯಾನಿಂಗ್ ವೇಳೆ ಗೊತ್ತಾಗಿತ್ತು. ಹೀಗಾಗಿ, ಆಕೆಯ ಗರ್ಭಪಾತ ಮಾಡಲು ನಿರ್ಧರಿಸಿದ್ದ.
ಮನೆಯಲ್ಲೇ ಆಕೆಗೆ ಗರ್ಭಪಾತ ಮಾಡಿಸುವಾಗ ಆಕೆ ಮೃತಪಟ್ಟಿದ್ದರು. ಅವರು ನರ್ಸ್ ಸುಕನ್ಯಾ (35) ಮತ್ತು ಸೇಲಂನ ಬ್ರೋಕರ್ ವನಿತಾ (35) ಅವರನ್ನು ಸಂಪರ್ಕಿಸಿದ ಮನೆಯಲ್ಲಿಯೇ ರಮ್ಯಾಗೆ ಗರ್ಭಪಾತ ಮಾಡಲು ಸಲಹೆ ಕೇಳಿದ್ದ. ಅವರು ಆ ಬಗ್ಗೆ ಕಣ್ಣನ್ಗೆ ವಿವರಿಸಿದ್ದರು. ಗರ್ಭಪಾತ ಮಾಡಿಸಿದ ನಂತರ ರಮ್ಯಾ ಅವರ ಆರೋಗ್ಯ ಹದಗೆಟ್ಟಿತು. ಬಳಿಕ ಅವರು ನಿಧನರಾದರು. ಇದನ್ನು ಮರೆಮಾಡಲು, ಕಣ್ಣನ್ ರಮ್ಯಾ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದರು.
For More Updates Join our WhatsApp Group :




