AI ಇಂಪ್ಯಾಕ್ಟ್ ಸಮಿಟ್‌ಗೆ ಸಿದ್ಧತೆ.

AI ಇಂಪ್ಯಾಕ್ಟ್ ಸಮಿಟ್‌ಗೆ ಸಿದ್ಧತೆ.

12 ಎಐ ಸ್ಟಾರ್ಟಪ್‌ಗಳೊಂದಿಗೆ ಪ್ರಧಾನಿ ಮೋದಿ ರೌಂಡ್‌ಟೇಬಲ್ ಸಭೆ.

ನವದೆಹಲಿ: ಫೆಬ್ರುವರಿಯಲ್ಲಿ ನಡೆಯಲಿರುವ ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಎಐ ಸ್ಟಾರ್ಟಪ್​ಗಳ ಸಭೆ ನಡೆಸಿದರು. ಲೋಕಕಲ್ಯಾಣ ಮಾರ್ಗ್​ನಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿಗಳು ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು. 12 ಸ್ಟಾರ್ಟಪ್​ಗಳು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಕೆಲಸ ಹಾಗೂ ಐಡಿಯಾಗಳನ್ನು ಪ್ರಧಾನಿಯವರ ಹಂಚಿಕೊಂಡಿವೆ.

ಮುಂದಿನ ತಿಂಗಳು ನಡೆಯುವ ಸಮಿಟ್​ನಲ್ಲಿ ‘ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್’ ಅಧಿವೇಶನದಲ್ಲಿ ಪಾಲ್ಗೊಳ್ಳಲು ಈ 12 ಸ್ಟಾರ್ಟಪ್​ಗಳು ಅರ್ಹತೆ ಪಡೆದಿವೆ. ಅವತಾರ್, ಭಾರತ್​ಜೆನ್, ಫ್ರಾಕ್ಟಲ್, ಗ್ಯಾನ್, ಜೆನ್​ಲೂಪ್, ಜ್ಞಾನಿ, ಇಂಟೆಲಿಹೆಲ್ತ್, ಸರ್ವಂ, ಶೋಧ್ ಎಐ, ಸಾಕೆಟ್ ಎಐ, ಟೆಕ್ ಮಹೀಂದ್ರ ಮತ್ತು ಝೆನ್​ಟೀಕ್ ಆ 12 ಸ್ಟಾರ್ಟಪ್​ಗಳಾಗಿವೆ. ಪ್ರಧಾನಿ ಜೊತೆಗಿನ ಸಭೆಯಲ್ಲಿ ಈ 12 ಸ್ಟಾರ್ಟಪ್​ಗಳ ಸಿಇಒಗಳು, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ರೌಂಡ್​ಟೇಬಲ್ ಮೀಟಿಂಗ್​ನಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಜಿತಿನ್ ಪ್ರಸಾದ ಅವರೂ ಪಾಲ್ಗೊಂಡಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *