ವಂದೇ ಮಾತರಂ ಹಾಡಿಗೆ ಪ್ರೀತಿ ವ್ಯಕ್ತಪಡಿಸಿದ ಮೋದಿ.
ಇಥಿಯೋಪಿಯಾ : ಇಥಿಯೋಪಿಯಾದಲ್ಲಿ ಮಂಗಳವಾರ ಸಂಜೆ ಪ್ರಧಾನಿ ಅಬಿ ಅಹ್ಮದ್ ಅಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಔತಣಕೂಟವನ್ನು ಆಯೋಜಿಸಿದ್ದರು. ಕೇವಲ ಊಟವಷ್ಟೇ ಅಲ್ಲದೆ ಜತೆಗೆ ಸಂಗೀತ ರಸ ಸಂಜೆಯೂ ಇತ್ತು. ಅದರಲ್ಲಿ ಇಥಿಯೋಪಿಯಾದ ಗಾಯಕರ ಕಂಠಸಿರಿಯಲ್ಲಿ ವಂದೇ ಮಾತರಂ ಗಾಯನ ಮೂಡಿಬಂದಿತ್ತು. ಇದನ್ನು ಕೇಳಿ ಪ್ರಧಾನಿ ಮೋದಿ ಖುಷಿಪಟ್ಟರು. ವಂದೇ ಮಾತರಂನ 150 ವರ್ಷಗಳನ್ನು ನಾವು ಆಚರಿಸುತ್ತಿರುವ ಈ ಸಮಯದಲ್ಲಿ ಅದು ಅತ್ಯಂತ ಹೃದಯಸ್ಪರ್ಶಿ ಕ್ಷಣವಾಗಿತ್ತು ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
For More Updates Join our WhatsApp Group :




