ಅಧಿಕಾರ ಹಂಚಿಕೆ’ ಬಿರುಗಾಳಿ ನಡುವೆ ಕುತೂಹಲಕರ ಭೇಟಿ.
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ನಲ್ಲಿ ಎದ್ದಿದ್ದ ‘ಅಧಿಕಾರ ಹಂಚಿಕೆ’ ಬಿರುಗಾಳಿ ತುಸು ತಣ್ಣಗಾಗಿರುವ ಸಂದರ್ಭದಲ್ಲೇ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಡಿಸಿಎಂ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ತಾಸು ಮಾತುಕತೆ ನಡೆಸಿದ್ದಾರೆ. ಆದರೆ, ಡಿಕೆಶಿ ಜೊತೆಗಿನ ಚರ್ಚೆಯ ಗುಟ್ಟನ್ನು ಪ್ರಿಯಾಂಕ್ ಖರ್ಗೆ ಬಿಟ್ಟುಕೊಟ್ಟಿಲ್ಲ. ಇದು ಕುತೂಹಲಕ್ಕೆ ಕಾರಣವಾಗಿದೆ.
ಇದಕ್ಕೂ ಮುನ್ನ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಮದುವೆಗೆ ಬಂದಿದ್ದ ಸಂದರ್ಭದಲ್ಲಿ ಡಿಸಿಎಂ ಅವರನ್ನು ಭೇಟಿಯಾದೆ ಅಷ್ಟೆ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
For More Updates Join our WhatsApp Group :
