ಖತರ್ನಾಕ್ ಲೇಡಿಯನ್ನ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ವಿದ್ಯಾರ್ಥಿಗಳು ದಾರಿ ತಪ್ಪದಂತೆ ಅವರನ್ನು ತಿದ್ದಿ ತೀಡುವ ಕೆಲಸ ಮಾಡಬೇಕಿದ್ದ ಅಧ್ಯಾಪಕಿಯೇ ಹಾದಿ ತಪ್ಪಿರುವ ಘಟನೆಯೊಂದು ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ವೀಕ್‌ಡೇಸ್‌ನಲ್ಲಿ ಪ್ರೊಫೆಸರ್ ಕೆಲಸ ಮಾಡಿ, ವಾರಂತ್ಯ ಬಂತಂದ್ರೆ ಸಾಕು ಕಳ್ಳತನಕ್ಕೆ ಇಳಿಯುತ್ತಿದ್ದ ಖತರ್ನಾಕ್ ಲೇಡಿಯನ್ನ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಂದೂರು ಬಳಿಯ ಖಾಸಗಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿರುವ ರೇವತಿಯ ಕೈಚಳಕ ಕಂಡು ಖಾಕಿಯೇ ದಂಗಾಗಿದೆ. ವಾರಪೂರ್ತಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಕ್ಕಳಿಗೆ ಪಾಠ ಮಾಡ್ತಿದ್ದ ಈ ಪ್ರಾಧ್ಯಾಪಕಿ, ಭಾನುವಾರ ಮಾತ್ರ ಕಳ್ಳತನ ನಡೆಸುತ್ತಿದ್ದಳು. ಸಂಬಂಧಿಕರ ರೀತಿಯಲ್ಲಿ ಮದುವೆ ಚೌಟ್ರಿಗೆ ಎಂಟ್ರಿಯಾಗುತ್ತಿದ್ದ ಈಗೆ ಅನುಮಾನ ಬಾರದಂತೆ ಎಲ್ಲರನ್ನೂ ಮಾತಾಡಿಸುತ್ತಿದ್ದಳು. ಬಳಿಕ ಚಿನ್ನಾಭರಣ ಎಗರಿಸೋದಲ್ಲದೆ, ಮದುವೆ ಊಟವನ್ನೂ ಮಾಡ್ಕೊಂಡು ಎಸ್ಕೇಪ್ ಆಗುತ್ತಿದ್ದಳು ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿಯೂ ಈಕೆ ಕೈಚಳಕ ತೋರಿದ್ದು, ಚಿನ್ನಾಭರಣ ಕದ್ದಿದ್ದಳು. ರೇವತಿ ಮೂಲತಃ ಶಿವಮೊಗ್ಗದವಳು ಎನ್ನಲಾಗಿದ್ದು, ಬೆಂಗಳೂರಿನ ಕೆ.ಆರ್. ಪುರಂನಲ್ಲಿ ವಾಸವಿದ್ದಳು. ಭಾನುವಾರ ಬೆಂಗಳೂರನ್ನ ರೌಂಡ್ಸ್ ಹಾಕ್ತಿದ್ದ ಈಕೆ ಮದುವೆ ಇರುವ ಚೌಟ್ರಿಗಳನ್ನೇ ಟಾರ್ಗೆಟ್ ಮಾಡಿ ಎಂಟ್ರಿಯಾಗ್ತಿದ್ದಳು. ವಿಚಾರಣೆ ವೇಳೆ ಒಟ್ಟು ಮೂರು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿರೋದು ಗೊತ್ತಾಗಿದೆ.
ದೂರುದಾರನೇ ಆರೋಪಿ!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಗ್ರಾಮದಲ್ಲಿ ಸಹಕಾರ ಸಂಘದ ಕಚೇರಿ ಬೀಗ ಒಡೆದು ಹಣ ಕಳ್ಳತನ ಪ್ರಕರಣ ಸಂಬಂಧ ದೂರುದಾರನೇ ಆರೋಪಿ ಎಂಬುದು ಗೊತ್ತಾಗಿದೆ. ಕಳವು ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಮೂರ್ತಿ ಆರೋಪಿ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಡಿಸೆಂಬರ್ 17ರಂದು ಕಬೋರ್ಡ್ನ ಕಬ್ಬಿಣದ ರಾಡ್ನಿಂದ ಒಡೆದು 14 ಲಕ್ಷ 12 ಸಾವಿರ ರೂ. ಹಣ ಕಳ್ಳತನ ಮಾಡಲಾಗಿತ್ತು. ಬಂಧಿತನಿಂದ ಸದ್ಯ 8 ಲಕ್ಷ ಹಣ ಜಪ್ತಿ ಮಾಡಲಾಗಿದೆ.
For More Updates Join our WhatsApp Group :




