ಆಸ್ತಿ ತೆರಿಗೆ ಬಾಕಿ : ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ BBMP ನೋಟಿಸ್

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್ ನೀಡಿದೆ. ಶೇಕಡಾ ನೂರರಷ್ಟು ತೆರಿಗೆ ಬಾಕಿ ಪಾವತಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಆದರೆ ಬಿಬಿಎಂಪಿ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಈಗಾಗಲೇ ಶೇಕಡ 25ರಷ್ಟು ತೆರಿಗೆ ಪಾವತಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಪರ‍್ಣ ತೆರಿಗೆ ವಿನಾಯಿತಿ ಇದೆ. ನಮ್ಮ ರಾಜ್ಯದಲ್ಲಿ ಶೇಕಡ 25 ರಷ್ಟು ತೆರಿಗೆ ಪಾವತಿಸಲಾಗುತ್ತಿದೆ. ಈಗ ಪಾಲಿಕೆ ನೂರರಷ್ಟು ತೆರಿಗೆ ಪಾವತಿಸಲು ಸೂಚನೆ ನೀಡಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರದ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕ್ಯಾಮ್ಸ್ ವಿರುದ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಒಕ್ಕೂಟ ಈ ಹಿಂದೆ ಕರ‍್ಟ್ ಮೊರೆ ಹೋಗಿತ್ತು.. ಆದರೆ ಇದೀಗ 2021ರ ಸಾಲಿನ ಪರ‍್ಣ ತೆರಿಗೆಯನ್ನು ಪಾವತಿಸುವಂತೆ ಪಾಲಿಕೆ ಸೂಚನೆ ನೀಡಿದೆ. ಜುಲೈ 31ರವರೆಗೆ ಒಟಿಎಸ್ ಮೂಲಕ ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇದು ಅನ್ವಯಿಸದೇ ಇರುವುದರಿಂದ ಸಂಕಷ್ಟ ಎದುರಾಗಿದೆ. ರ‍್ಕಾರ ಬಲವಂತವಾಗಿ ವಸೂಲಿಗೆ ನಿಂತಿದೆ ಎಂದು ಕ್ಯಾಮ್ಸ್ ಕಿಡಿ ಕಾರಿದೆ.

ಉಪಮುಖ್ಯಮಂತ್ರಿಗಳ ಮೂಲಕ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಪಾಲಿಕೆಯ ಬಲವಂತದ ವಸೂಲಿ ನಡೆಯಿಂದ ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡಿದೆ. ಈ ಬಗ್ಗೆ ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಲು ಖಾಸಗಿ ಶಿಕ್ಷಣ ಸಂಘಟನೆಗಳ ಒಕ್ಕೂಟ ಸಜ್ಜಾಗಿದೆ.

Leave a Reply

Your email address will not be published. Required fields are marked *