ಉತ್ತರ ಕರ್ನಾಟಕದ ಜನಪದ ಕಲಾವಿದರು ಸಿಡಿದೆದ್ದರು.
ಬಾಗಲಕೋಟೆ : ಉತ್ತರ ಕರ್ನಾಟಕದ ಜನಪದ ಕಲೆಗಳು ತಮ್ಮ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿವೆ. ಆದರೆ, ಇತ್ತೀಚೆಗೆ ಹಾಡು, ನೃತ್ಯ ಮತ್ತು ನಾಟಕಗಳಲ್ಲಿ ಅಶ್ಲೀಲ ಪದಗಳ ಬಳಕೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಉತ್ತರ ಕರ್ನಾಟಕದ ಕಲಾವಿದರೇ ಆಕ್ರೋಶ ವ್ಯಕ್ತಪಡಿಸಿದ್ದು, ಅಶ್ಲೀಲತೆಗೆ ಕಡಿವಾಣ ಹಾಕುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಮ್ಯೂಸಿಕ್ ಮೈಲಾರಿ ಬಂಧನದ ನಂತರ ಈ ವಿಷಯ ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ. ಅವರ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಅಶ್ಲೀಲವಾಗಿ ಮಾತನಾಡಿ ನಿಂದಿಸಿದ ಘಟನೆಗಳು ನಡೆದಿರುವುದು ವರದಿಯಾಗಿತ್ತು. ಈ ಬಂಧನವು ಎಲ್ಲ ಕಲಾವಿದರಿಗೆ ಒಂದು ಪಾಠವಾಗಬೇಕು ಎಂದು ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಆರ್ಕೆಸ್ಟ್ರಾ, ನಾಟಕ, ಆಲ್ಬಮ್ ಸಾಂಗ್, ನೃತ್ಯ ಮತ್ತು ಉಡುಪುಗಳಲ್ಲಿ ಅಶ್ಲೀಲತೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH



