ಹೈದರಾಬಾದ್ನಲ್ಲಿ ಸೊಳ್ಳೆ ಸಮಸ್ಯೆಗೆ ಗಮನ ಸೆಳೆಯಲು ವಿನೂತನ ಕ್ರಮ.
ಹೈದರಾಬಾದ್: ಭಾರತ ರಾಷ್ಟ್ರ ಸಮಿತಿ ಶಾಸಕ ಸುಧೀರ್ ರೆಡ್ಡಿ ಇಂದು ಹೈದರಾಬಾದ್ನ ವಿಧಾನಸಭೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಸೊಳ್ಳೆ ಪರದೆ ಧರಿಸಿಕೊಂಡು, ಫಾಗಿಂಗ್ ಯಂತ್ರವನ್ನು ಹಿಡಿದುಕೊಂಡು ಆಗಮಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೊಳ್ಳೆ ಸಮಸ್ಯೆಯ ವಿರುದ್ಧ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಮಾಧ್ಯಮ ಕೇಂದ್ರಕ್ಕೆ ಸೊಳ್ಳೆ ಪರದೆ ಮತ್ತು ಫಾಗಿಂಗ್ ಯಂತ್ರವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಸುಧೀರ್ ರೆಡ್ಡಿ ಅವರಿಗೆ ವಿಧಾನಸಭೆ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಭದ್ರತಾ ಸಿಬ್ಬಂದಿಯ ಈ ವರ್ತನೆಯ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಧೀರ್ ರೆಡ್ಡಿ, ಸೊಳ್ಳೆ ಸಮಸ್ಯೆಯ ತೀವ್ರತೆಯಿಂದಾಗಿ ಜನರು ಹೈದರಾಬಾದ್ನಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯು ನಗರದ ಬ್ರಾಂಡ್ ಇಮೇಜ್ಗೆ ಹಾನಿ ಮಾಡುತ್ತಿದೆ ಎಂದ ಅವರು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
For More Updates Join our WhatsApp Group :




